ಉಪ್ಪಿನಂಗಡಿ (www.vknews.com) : ಉಪ್ಪಿನಂಗಡಿ ಬಸ್ ನಿಲ್ದಾಣ ದಿನನಿತ್ಯ ಜನಜಂಗುಳಿಯಿಂದ ಕೂಡಿದ್ದು ಅಲ್ಲದೇ ಬೆಂಗಳೂರು-ಮಂಗಳೂರು ಹೆದ್ದಾರಿಯ ಸಮೀಪವಿರುದ್ದರಿಂದ ಹಲವಾರು ಬಸ್ಸುಗಳು ನಿಲ್ದಾಣದೊಳಗೆ ಒಡಾಡುತ್ತಿರುತ್ತದೆ. ಬಸ್ಸುಗಳು ಒಳ-ಹೊರ ಹೋಗುವ ಜಾಗಗಳು ಬಹಳ ಕಿರಿದಾಗಿದ್ದು ಬಸ್ಸ್ ನಿಲ್ದಾಣದ ಮುಂಬಾಗದಲ್ಲಿ ಕಮರ್ಷಿಯಲ್ ಕಟ್ಟಡಗಳು ತುಂಬಿಕೊಂಡಿದೆ. ಅಲ್ಲದೆ ಬಸ್ಸಗಳು ಒಳ-ಹೊರ ಹೋಗುವ ಸ್ಥಳದಲ್ಲಿ ಹಂಪ್ಸ್ಗಳು ಇಲ್ಲದಿರುವುದು ಸಹ ಅಪಘಾತಕ್ಕೆ ಕಾರಣವಾಗುತ್ತಿದೆ.
ಚಾಲಕನ ಅಜಾಗರುಕತೆಯಿಂದ ನಿನ್ನೆ ಎರಡು ಜೀವ ಸೇರಿ ಈಗಾಗಲೇ ನಾಲ್ಕು ಜೀವಗಳು ನಿಲ್ದಾಣದೊಳಗಿನ ಅಪಘಾತದಲ್ಲಿ ಜೀವವನ್ನು ತೆತ್ತಿದ್ದು ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಇನ್ನೆಷ್ಟು ಜೀವ ಬಲಿಯಾಗಬೇಕಿದೆ. ಅದಕ್ಕಿಂತ ಮೊದಲು ಗ್ರಾಮ ಪಂಚಾಯತ್ ಎಚ್ಚೆತ್ತುಕೊಂಡು ಬಸ್ ನಿಲ್ದಾಣದ ಮುಂಬಾಗದಲ್ಲಿರುವ ಕಮರ್ಷಿಯಲ್ ಕಟ್ಟಡಗಳನ್ನು ತೆರವುಗೊಳಿಸಬೇಕು. ಖಾಸಾಗಿ ಹಾಗೂ ಕೆ.ಎಸ್.ಅರ್.ಟಿ.ಸಿ ಬಸ್ಸುಗಳಿಗೆ ಪ್ರತ್ಯೇಕ ನಿಲ್ದಾಣವನ್ನು ನಿರ್ಮಿಸಬೇಕು.ಬಸ್ ಹೊರ-ಒಳ ಹೋಗುವ ಜಾಗದಲ್ಲಿ ಹಂಪ್ಸ್ಗಳನ್ನು ನಿರ್ಮಿಸಬೇಕೆಂದು ಅಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಿಡಿಓಗೆ ಮನವಿ ಸಲ್ಲಿಸಲಾಯಿತು.
ಮುಸ್ತಾಫ ಲತೀಫಿ ಅಧ್ಯಕ್ಷರು ಎಸ್ಡಿಪಿಐ ಉಪ್ಪಿನಂಗಡಿ ಬ್ಲಾಕ್, ಮಜೀದ್ ಮಠ ಕಾರ್ಯದರ್ಶಿ ಎಸ್ಡಿಪಿಐ ಉಪ್ಪಿನಂಗಡಿ ಬ್ಲಾಕ್, ಪಂಚಾಯತ್ ಸದಸ್ಯರಾದ ರಶೀದ್ ಮಠ, ಮೈಸಿದಿ ಇಬ್ರಾಹಿಂ, ಝಕರಿಯ್ಯಾ ಕೊಡಿಪ್ಪಾಡಿ ಅಧ್ಯಕ್ಷರು ಎಸ್ಡಿಪಿಐ ಗ್ರಾಮ ಸಮಿತಿ ನೆಕ್ಕಿಲಾಡಿ, ಹಸೈನಾರ್ ಸಿಟಿ ಸದಸ್ಯರು ಎಸ್ಡಿಪಿಐ ಉಪ್ಪಿನಂಗಡಿ ಬ್ಲಾಕ್ ನಿಯೋಗದಲ್ಲಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.