ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಒಂದು ಧರ್ಮವನ್ನು ಪ್ರತಿನಿಧಿಸುವ ಕೇಸರಿ ಬಣ್ಣದ ಬಟ್ಟೆ ಧರಿಸಿ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡಿರುವ ಪೊಲೀಸರ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಒಂದೆಡೆ ವೈರಲ್ ಆಗತ್ತಿವೆ. ಇದರ ನಡುವೆ ಪೊಲೀಸರು ಪೊಲೀಸ್ ಠಾಣೆಗಳಲ್ಲಿ ದಸರಾ ಪೂಜೆ ಮಾಡಲು ಕಾನೂನಿನ ಮಾನ್ಯತೆ ಇದೆಯೇ ಎಂಬ ಪ್ರಶ್ನೆ ಹಲವರಲ್ಲಿ ಇದೆ.
ಕಾನೂನು ಏನು ಹೇಳುತ್ತದೆ ? : ಪೊಲೀಸರ ಮ್ಯಾನುಯಲ್ ಪ್ರಕಾರ ಪೊಲೀಸ್ ಠಾಣೆಯಲ್ಲಿ ಯಾವುದೇ ಒಂದು ಧರ್ಮ ಪ್ರತಿನಿಧಿಸುವ ಪೋಟೋ ಇಡಲು ಸಹ ಅವಕಾಶವಿಲ್ಲ. ಒಂದು ಕೋಮು ಸಮುದಾಯ ಪ್ರತಿನಿಧಿಸುವಂತಹ ಬಟ್ಟೆ ಧರಿಸುವಂತಿಲ್ಲ, ಗಡ್ಡ ಬಿಡುವಂತಿಲ್ಲ. ಒಂದು ಧರ್ಮವನ್ನು ಪ್ರತಿನಿಧಿಸುವ ಹಬ್ಬ ಪೊಲೀಸ್ ಠಾಣೆಯಲ್ಲಿ ಆಚರಿಸುವುದು ಸರಿಯಲ್ಲ. ಒಂದು ಧರ್ಮ ಪ್ರತಿನಿಧಿಸುವ ಬಟ್ಟೆ ಕೂಡ ಹಾಕುವಂತಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.