ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ತಾಲೂಕಿನ ಸುಳ್ಯಪದವು ಎಂಬಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ಹಿರಿಯ ಮುಖಂಡ ನಾರಾಯಣ ರೈ ಅತ್ಯಾಚಾರ ಮಾಡಿ ಗರ್ಭದಾನ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಬೇಕಾದ ಪೊಲೀಸರು ಆರೋಪಿಯನ್ನು ರಕ್ಷಿಸಲು ಹೊರಟಿರುವ ನಡೆ ಖಂಡನೀಯ. ಅದೇ ರೀತಿ ಆರೋಪಿಯನ್ನು ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ಆರೋಪಿ ಬಿಜೆಪಿ ಮುಖಂಡ ತನ್ನ ಪ್ರಭಾವ ಬಳಸಿಕೊಂಡು ಸಂಪೂರ್ಣ ಪ್ರಕರಣವನ್ನು ಬಾಲಕಿಯ ಸಹೋದರನ ಮೇಲೆ ಹೊರಿಸಿ ಘಟನೆಯ ಸತ್ಯಾಸತ್ಯತೆ ಮುಚ್ಚಿಹಾಕಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಸ್ಥಳೀಯ ಪೋಲಿಸ್ ಅಧಿಕಾರಿಗಳು ಬಾಲಕಿಯ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಮತ್ತು ಡಿಎನ್ಎ ಪರೀಕ್ಷೆ ನಡೆಸದೆ ಪ್ರಕರಣವನ್ನು ಬಾಲಕಿಯ ಅಣ್ಣನ ತಲೆಗೆ ಕಟ್ಟಿ ಇಲ್ಲಿನ ಆಡಳಿತ ವ್ಯವಸ್ಥೆ ಕೈಜೋಡಿಸಿರುವುದು ಆರೋಪಿಯೊಂದಿಗೆ ವಿಪರ್ಯಾಸ.
ಇಷ್ಟೆಲ್ಲಾ ನಡೆದು ಒಂದು ತಿಂಗಳು ಕಳೆದರೂ ಮಾಧ್ಯಮವಾಗಲಿ, ಆಡಳಿತ ವ್ಯವಸ್ಥೆಯಾಗಲಿ ಮಾತೆತ್ತಿಲ್ಲ. ಒಟ್ಟಿನಲ್ಲಿ ಬಾಲಕಿಯ ಕುಟುಂಬದ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಆರೋಪಿ ಬಿಜೆಪಿ ಮುಖಂಡನ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ. ಈ ಘಟನೆಯ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಯಾಗಬೇಕು. ಪ್ರಕರಣ ಮುಚ್ಚಿ ಹಾಕಲು ಕೈಜೋಡಿಸಿದ ಎಲ್ಲಾ ಅಧಿಕಾರಿಗಳನ್ನು ತನಿಖೆ ನಡೆಸಿ ಶಿಕ್ಷೆಗೊಳಪಡಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷರಾದ ಅನ್ಸಾರ್ ಬೆಳ್ಳಾರೆ ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.