ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್): ಕೊರೊನಾ ವಿರುದ್ಧ ಲಸಿಕೆ ಅಭಿಯಾನದಲ್ಲಿ 100 ಕೋಟಿಗೂ ಹೆಚ್ಚಿನ ಡೋಸ್ಗಳನ್ನು ನೀಡುವುದರ ಮೂಲಕ ಭಾರತ ಮಹತ್ವದ ಸಾಧನೆ ಮಾಡಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ . ಕೆ.ಎನ್.ವೇಣುಗೋಪಾಲ್ ಹೇಳಿದರು .
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ , ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಲಸಿಕೆ ಅಭಿಯಾನದಲ್ಲಿ 100 ಕೋಟಿಗೂ ಹೆಚ್ಚಿನ ಡೋಸ್ಗಳನ್ನು ನೀಡಿದ್ದಕ್ಕಾಗಿ , ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸನ್ಮಾನಿಸಿ ಮತ ನಾಡಿದ ಅವರು , ದೇಶದಲ್ಲಿ ಕೋವಿಡ್ -19 ವಿರುದ್ಧ ಲಸಿಕೆ ಕಾರ್ಯಕ್ರಮ ಆರಂಭವಾಗಿ 279 ದಿನ ಕಳೆದಿದೆ .
ಈ ಅವಧಿಯಲ್ಲಿ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದು ಒಂದು ಮೈಲುಗಲ್ಲು ಎಂದು ಹೇಳಿದರು .ತಾಲ್ಲೂಕು ವೈದ್ಯಾಧಿಕಾರಿ ಡಾ . ವಿಜಯ ಮಾತ ನಾಡಿ , ಕೋವಿಡ್ ವಿರುದ್ಧ ಕೈಗೊಳ್ಳಲಾಗಿ ರುವ ಲಸಿಕಾ ಅಭಿಯಾನ ನಿರೀಕ್ಷಿತ ಫಲ ನೀಡಿದೆ ಯಾದರೂ , ಇನ್ನೂ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಿರುವುದು ಬೇಸರದ ಸಂಗತಿ ಯಾಗಿದೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ . ಎಂ.ಸಿ.ವಿಜಯ್ , ಸರ್ಕಾರಿ ಆಸ್ಪತ್ರೆ ಆಡಳಿತಾದಿ ಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ಡಾ . ಉಮಾ ಶಂಕರ್ , ಫಾರಸಿ ಮುಖ್ಯಸ್ಥ ಮಹಮದ್ ಅಲಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡ ಲಾಯಿತು . ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು .
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎ.ಅಶೋಕ್ ರೆಡ್ಡಿ , ಮುಖಂಡರಾದ ಜಯರಾಮ ರೆಡ್ಡಿ , ನಾರಾಯಣಸ್ವಾಮಿ , ಅಶೋಕ್ ರೆಡ್ಡಿ , ನಿಶಾಂತ್ , ರಮೇಶ್ , ವಿನೋದ್ , ಮಹೇಶ್ , ಸುರೇಶ್ ನಾಯಕ್ , ರಾಮಾಂಜಿ , ಶೇಖ್ ಷಫಿವುಲ್ಲಾ , ಟಿಪ್ಪು ಖಾನ್ , ಮುಬಾರಕ್ ಹಸನ್ , ಅನ್ವರ್ , ಸದ್ದಾಮ್ ಹುಸೇನ್ , ಆಲಿ ಇಲಿಯಾಸ್ , ಸಾದಿಕ್ ಇದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.