ದುಬೈ (ವಿಶ್ವ ಕನ್ನಡಿಗ ನ್ಯೂಸ್) : ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ ಯ ವತಿಯಿಂದ ಮೌಲಿದ್ ಮಜ್ಲಿಸ್ ಮತ್ತು ಐದನೇ ವಾರ್ಷಿಕ ಸಭಾ ಕಾರ್ಯಕ್ರಮ ದುಬೈ ದೇರಾ ಓರಿಯೆಂಟಲ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ದಿನಾಂಕ 8-10-2021 ಶುಕ್ರವಾರ ಜುಮಾ ನಮಾಝಿನ ಬಳಿಕ ನಡೆಯಿತು.
ನೂರುಲ್ ಹುದಾ ದುಬೈ ಸಮಿತಿ ಯ ಗೌರವಾಧ್ಯಕ್ಷ ರಾದ ಸುಲೈಮಾನ್ ಮೌಲವಿ ಕಲ್ಲೆಗ ಅವರ ನೇತೃತ್ವದಲ್ಲಿ ಮೌಲಿದ್ ಮತ್ತು ದುವಾ ಮಜ್ಲಿಸ್ ನಡೆದ ಬಳಿಕ ಆರಂಭವಾದ ವಾರ್ಷಿಕ ಸಭಾ ಕಾರ್ಯಕ್ರಮಕ್ಕೆ ಸಮಿತಿಯ ಕಾರ್ಯದರ್ಶಿ ಅಝೀಝ್ ಸೋಂಪಾಡಿ ನೆರೆದವರನ್ನು ಸ್ವಾಗತಿಸಿದರು.ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷ ರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರು ಮಾತನಾಡಿ ನೂರುಲ್ ಹುದಾ ಸಮಿತಿಯೋಂದಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಪ್ರಾರ್ಥಿಸುತ್ತಾ ಪವಿತ್ರ ಕುರಾನ್ ಸೂಕ್ತ ದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ದರು.
ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ, ಸಾಮಾಜಿಕ ನೇತಾರರಾದ ಜನಾಬ್ ಹಾರಿಸ್ ದರ್ಬೆ ಅವರನ್ನು ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು
ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಕಾರ್ಯಾಧ್ಯಕ್ಷ ಅಶ್ರಫ್ ಪರ್ಲಡ್ಕ ಅವರು ವಾರ್ಷಿಕ ವರದಿ ವಾಚಿಸಿದರು, ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಅವರು ಸಮಿತಿಯಲ್ಲಿ ನಡೆದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ ಸಮಿತಿ ಯೊಂದಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದು ಹಾಲಿ ಸಮಿತಿ ಯನ್ನು ಬರ್ಖಾಸ್ತುಗೊಳಿಸಿದರು.
ರಾಷ್ಟ್ರೀಯ ಸಮಿತಿಯ ಗೌರವ ಸಲಹೆಗಾರಾದ ಜನಾಬ್ ಅಶ್ರಫ್ ಶಾ ಮಾಂತೂರು ಅವರು ಚುನಾವಣಾ ಅಧಿಕಾರಿ ಯಾಗಿ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಗೆ ಚಾಲನೆ ನೀಡಿದರು
ನೂತನ ಸಮಿತಿಯ ಪದಾಧಿಕಾರಿಗಳ ವಿವರ
ರಕ್ಷಾಧಿಕಾರಿ: ಮೊಯಿದೀನ್ ಕುಟ್ಟಿ ಹಾಜಿ ದಿಬ್ಬಮುಖ್ಯ ಪೋಷಕರು: ಯೂಸುಫ್ ಈಶ್ವರಮಂಗಲಗೌರವಾಧ್ಯಕ್ಷರು : ಸಯ್ಯದ್ ಅಸ್ಕರ್ ಅಲಿ ತಂಙಳ್
ಅದ್ಯಕ್ಷರು : ಶೆರೀಫ್ ಕಾವುಕಾರ್ಯಾಧ್ಯಕ್ಷರು : ಅಶ್ರಫ್ ಪರ್ಲಡ್ಕಪ್ರಧಾನ ಕಾರ್ಯದರ್ಶಿ : ಅಬ್ದುಲ್ ಲತೀಫ್ ಕೌಡಿಚ್ಚಾರ್ಕೋಶಾಧಿಕಾರಿ : ಅಶ್ರಫ್ ಯಾಕೂತ್ ನೆಕ್ಕರೆ
ಚುನಾವಣಾ ಅಧಿಕಾರಿ ಯಾಗಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಜನಾಬ್ ಅಶ್ರಫ್ ಶಾ ಮಾಂತೂರು ಅವರು ನೂತನ ಸಮಿತಿಗೆ ಶುಭ ಹಾರೈಸಿದರು.
ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ನೂರುಲ್ ಹುದಾ ದುಬೈ ಸಮಿತಿ ಗೌರವಾಧ್ಯಕ್ಷ ರಾದ ಸುಲೈಮಾನ್ ಮೌಲವಿ ಕಲ್ಲೆಗ, ಅಧ್ಯಕ್ಷರಾದ ಜನಾಬ್ ಅನ್ವರ್ ಮಾಣಿಲ , ನೂರ್ ಮುಹಮ್ಮದ್ ನೀರ್ಕಜೆ ಮೊದಲಾದವರು ಮಾತನಾಡಿ ನೂತನ ಸಮಿತಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನೂರುಲ್ ಹುದಾ ಸ್ಥಾಪನೆಯ ಉನ್ನತಿಗೆ ಸಹಾಯ ಸಹಕಾರವನ್ನು ನೀಡುತ್ತಾ ಬಂದಂತಹಾ ಹಾಜಿ ಹಾರಿಸ್ ದರ್ಬೆ ಅವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು
ನೂರುಲ್ ಹುದಾ ದುಬೈ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಜನಾಬ್ ಇಸ್ಮಾಯಿಲ್ ತಿಂಗಳಾಡಿ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.