ದುಬೈ (ವಿಶ್ವ ಕನ್ನಡಿಗ ನ್ಯೂಸ್) ; ಭಾರತವು ಆಡುವ ಬಳಗದ ಆಯ್ಕೆಯಲ್ಲಿ ಎಡವಿತು, ಹೀಗಾಗಿ ನಾಯಕ ಕೊಹ್ಲಿಗೆ ಆರನೇ ಬೌಲರ್ ಕೊರತೆ ಕಾಡಿತ್ತು ಎಂದು ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಆಡುವ ಬಳಗದಲ್ಲಿ ಅವಕಾಶ ನೀಡಿದ್ದು ಹಿನ್ನಡೆಯಾಯಿತು ಎಂದು ಹೇಳಿದ ಇನ್ಜಮಾಮ್ ಉಲ್ ಹಕ್, ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 8 ಎಸೆತಗಳನ್ನು ಎದುರಿಸಿ 11 ರನ್ಗಳಿಸಿದ್ದರು. ಭಾರತದ ಇನ್ನಿಂಗ್ಸ್ನ 19ನೇ ಓವರ್ನಲ್ಲಿ ಪಾಂಡ್ಯ ಶಾಹೀನ್ ಅಫ್ರಿದಿ ಎಸೆತದಲ್ಲಿ ಪುಲ್ ಶಾಟ್ ಬಾರಿಸಲು ಹೋಡಿ ಭುಜಕ್ಕೆ ಏಟು ಮಾಡಿಕೊಂಡರು.
ಅದಾದ ನಂತರ ಸ್ಕ್ಯಾನ್ಗೆ ಒಳಗಾದ ಪಾಂಡ್ಯ ಫೀಲ್ಡಿಂಗ್ಗೆ ಇಳಿದಿರಲಿಲ್ಲ. ಇದು ನಾಯಕ ಕೊಹ್ಲಿಗೆ ಆರನೇ ಬೌಲರ್ನ ಕೊರತೆ ಕಾಡಿತು. ಇದರಿಂದ ವಿರಾಟ್ ಕೊಹ್ಲಿ ಮತ್ತಷ್ಟು ಒತ್ತಡಕ್ಕೆ ಒಳಗಾದರು. ಭಾರತ ತಂಡ ಆರನೇ ಬೌಲರ್ನೊಂದಿಗೆ ಆಡಿದ್ದರೆ ತಂಡಕ್ಕೆ ಅನುಕೂಲವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.