ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಡಿಸಿಸಿ ಬ್ಯಾಂಕ್ ವಿರುದ್ಧ ದಾರಿಯಲ್ಲಿ ಹೋಗೂ ದಾಸಪ್ಪನೋರಲ್ಲ ನಾನಾ ರೀತಿ ಮಾತನಾಡಿಕೊಳ್ಳುತ್ತಾರೆ . ರಾಜಕೀಯ ಇರುತ್ತೆ ಹೋಗುತ್ತೆ ಒಂದು ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಸರಿಯಲ್ಲಿ ಬಾಯಿ , ನಾಲಿಗೆಗೆ ಹಿಡಿತ ಇರಬೇಕು ಎಂದು ಡಿಸಿಸಿ ಬ್ಯಾಂಕ್ ವಿರುದ್ಧದ ಟೀಕಾಕಾರಿಗೆ ಶಾಸಕ ಕೆ.ಶ್ರೀನಿವಾಸಗೌಡ ಖಾರವಾಗಿ ಪ್ರತಿಕ್ರಿಯಿಸಿದರು.
ಬುಧವಾರ ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಕುರಗಲ್ ಗ್ರಾಮದಲ್ಲಿ ನಡೆದ ೨೦೨೦-೨೧ನೇ ಸಾಲಿನ ಸರ್ವಸದಸ್ಯರ ಸಭೆ ಹಾಗೂ ಜನಸೇವಾ ಕೇಂದ್ರದ ಯೋಜನೆಯಡಿ ನಿರ್ಮಿತವಾದ ಗೋದಾಮು ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಬ್ಯಾಂಕ್ಗೆ ಬೀಗ ಹಾಕುವ ಸ್ಥಿತಿ ಬಂದಿತ್ತು , ಡಿಸಿಸಿ ಬ್ಯಾಂಕ್ ಕತೆ ಮುಗಿತು ಎಂದೇ ಭಾವಿಸಿದ್ದೆ , ಅಂತಹ ಸಂಸ್ಥೆಗೆ ಮರುಜೀವ ನೀಡಿ , ಇಂದು ದೇಶದಲ್ಲೇ ನಂ .೧ ಮಾಡಿದ್ದಾರೆ , ಇದನ್ನು ಸಹಿಸದೇ ಮಾತನಾಡುವ ದಾರಿಹೋಕರ ಮಾತುಗಳಿಗೆ ಕಿವಿಗೊಡದಿರಿ ಎಂದು ಬ್ಯಾಂಕ್ ಆಡಳಿತ ಮಂಡಳಿತ ಕಿವಿಮಾತು ಹೇಳಿದರು.
ನಾನು ರಾಜಕೀಯಕ್ಕಿಂತ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ . ತಾಲ್ಲೂಕು ಸೋಸೈಟಿಯಿಂದ ಹಿಡಿದು ಅಂತರಾಷ್ಟ್ರೀಯ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ . ಈಗ ಹೊರ ದೇಶದ ಸಹಕಾರ ಸಂಘದ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದ , ಈ ಕ್ಷೇತ್ರದ ಬಗ್ಗೆ ಅರಿವಿಲ್ಲದವರು ಬಾಯಿ , ನಾಲಿಗೆಮೇಲೆ ಹಿಡಿತ ಇಟ್ಟು ಮಾತನಾಡಬೇಕು ಎಂದು ತಾಕೀತು ಮಾಡಿದರು .
ರಾಜಕೀಯ ಉದ್ದೇಶಕ್ಕೆ ಹೇಳಿಕೆ ನೀಡಿದರೆ ಅದನ್ನು ಜನ ನಂಬುವುದಿಲ್ಲ . ಡಿಸಿಸಿ ಬ್ಯಾಂಕ್ ಹಿಂದೆ ಮುಳುಗೋಗುವ ಸ್ಥಿತಿಯಲ್ಲಿತ್ತು . ಅದರ ನೆರವಿಗೆ ಆಗ ಯಾರು ಬರಲಿಲ್ಲ . ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ತಂಡದವರು ಅಧಿಕಾರಕ್ಕೆ ಬಂದು ರಾಜ್ಯಕ್ಕೆ ಮಾದರಿಯಾಗಿ ಬ್ಯಾಂಕನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು .
ಬ್ಯಾಂಕಿನ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ , ಬ್ಯಾಂಕಿನ ಅಭಿವೃದ್ಧಿ ಸಹಿಸಲಾರದವರು ಇಂದು ನಾನಾ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ . ರೈತರ , ಮಹಿಳೆಯರು ಬ್ಯಾಂಕಿನ ಶಕ್ತಿಯಾಗಿದ್ದು , ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಚ್ಚರಿಸಿದರು .
೧.೫ ಕೋಟಿ ರೂಲಾಭ ದಯಾನಂದ್ ಹರ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡಗಟ್ಟೂರು ಸೊಸೈಟಿ ಅಧ್ಯಕ್ಷ ಕೆ.ವಿ.ದಯಾನಂದ್ ಮಾತನಾಡಿ , ನಮ್ಮ ಸಹಕಾರ ಸಂಘವೂ ೨೦೨೦-೨೧ ಸಾಲಿನಲ್ಲಿ ೩೧.೫೦ ಕೋಟಿ ರೂ ವಹಿವಾಟು ನಡೆಸಿ ೧೦೫ ಕೋಟಿ ಲಾಭಗಳಿಸಿದ ಎಂದು ತಿಳಿಸಿದರು .
ಸ್ವಂತ ಬಂಡವಾಳ ೧.೨೦ ಕೋಟಿರೂ ಸಾಲ ನೀಡಲಾಗಿದೆ , ಜತೆಗೆ ಡಿಸಿಸಿಬ್ಯಾಂಕ್ ಆಶ್ರಯದಲ್ಲಿ ೨೮ ಕೋಟಿ ರೂ ಕೆಸಿಸಿ , ಮಧ್ಯಮಾವಧಿ , ಮಹಿಳಾ ಸಂಘಗಳಿಗೆ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು . ಪ್ಯಾಕ್ಸ್ಗಳ ಬಹುಸೇವಾ ಕೇಂದ್ರದಡಿ ನಬಾರ್ಡ್ನಿಂದ ಬಂದ ೩೬ ಲಕ್ಷ ಸಾಲ ಹಾಗೂ ಸೊಸೈಟಿಯಿಂದ ಸ್ವಂತ ಬಂಡವಾಳ ೧೯ ಲಕ್ಷ ಹೂಡಿ ಒಟ್ಟು ೫೫ ಲಕ್ಷ ವೆಚ್ಚದಲ್ಲಿ ಚನ್ನಸಂದ್ರ ಮತ್ತು ಕುರಗಲ್ನಲ್ಲಿ ಎರಡು ಕುರಗಲ್ನಲ್ಲಿ ಎರಡು ಗೋದಾಮು ನಿರ್ಮಿಸಿದ್ದು , ಇದು ಎರಡೂ ಜಿಲ್ಲೆಯಲ್ಲೇ ನಬಾರ್ಡ್ ಯೋಜನ ಸದ್ಬಳಕೆ ಮಾಡಿಕೊಂಡ ಪ್ರಥಮ ಮತ್ತು ಮಾದರಿ ಸಂಘವಾಗಿದೆ ಎಂದು ತಿಳಿಸಿದರು .
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ , ೧೦ ವರ್ಷಗಳ ಹಿಂದೆ ಬ್ಯಾಂಕ್ ಹೀನಾಯ ಸ್ಥಿತಿಯಲ್ಲಿತ್ತು . ಆಗಿನ ಸರ್ಕಾರ ಅಡಳಿತಾಧಿಕಾರಿಯನ್ನು ನೇಮಿಸಿದರೂ ಸಹ ೧೦ ವರ್ಷ ಆಡಳಿತ ನಡೆಸಿದ ಅಧಿಕಾರಿಗಾಳು ಬ್ಯಾಂಕನ್ನು ಉಳಿಸಲಾಗಲಿಲ್ಲ .
ಆನಂತರ ಅಧಿಕಾರಕ್ಕೆ ಬಂದ ಬ್ಯಾಲಹಳ್ಳಿಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಬ್ಯಾಂಕನ್ನು ೪೪ ಕೋಟಿಯಿಂದ ೧೫೦೦ ಕೋಟಿ ವಹಿವಾಟಿಗೆ ತಲುಪಿಸಿ ಅವಿಭಜಿತ ಜಿಲ್ಲೆಯಲ್ಲಿ ಮನೆಮಾತಾಗಿಸಿದೆ ಎಂದರು . ಹಿಂದ ಬ್ಯಾಂಕ್ ಹೀನಾ ಸ್ಥಿತಿಯಲ್ಲಿದ್ದ ಕಾರಣ ಅಂದಿನ ಸರ್ಕಾರಗಳ ಅವಧಿಯಲ್ಲಿ ಸಾಲ ಮನ್ನಾ ಯೋಜನೆಯ ಪ್ರಯೋಜನೆ ಜಿಲ್ಲೆಗೆ ದೊರೆಯಲಿಲ್ಲ.ಬ್ಯಾಂಕ್ ಸುಧಾರಣೆಯಾದ ಮೇಲೆ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎರಡೂ ಜಿಲ್ಲೆಯಲ್ಲಿ ೩೩೦ ಕೋಟಿ ಸಾಲ ಮನ್ನಾ ಪ್ರಯೋಜನ ದೂರಯಿತು ಎಂದು ತಿಳಿಸಿದರು .
ನಿರ್ದೇಶಕ ಯಲವಾರ ಸೋಣ್ಣೆಗೌಡ ಮಾತನಾಡಿ , ಸ್ತ್ರೀಶಕ್ತಿ ಸಂಘಗಳವರು ಮತ್ತು ರೈತರು ಒಕ್ಕೂಟಗಳನ್ನು ರಚನೆ ಮಾಡಿಕೊಂಡು ಆದಾಯೋತ್ಪನ್ನ ಚಟುಗಳಿಗೆಗಳನ್ನು ನಡೆಸಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು .ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ ಮಾತನಾಡಿ , ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಹಾಗೂ ನಮ್ಮ ಕಡಗಟ್ಟೂರು ಸೊಸೈಟಿ ಇಂದು ಕೋಟ್ಯಾಂತರ ರೂ ಸಾಲ ವಿತರಿಸುವ ಮೂಲಕ ಸಾಧನೆ ಮಾಡಿವೆ , ಈ ಸಾಧನೆಗೆ ಕಾರಣರಾದ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಕೆ.ವಿ.ದಯಾನಂದ ಅಭಿನಂದನಾರ್ಹರು ಎಂದರು . ಕಾರ್ಯ ಕ್ರಮದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕ ವೆಂಕಟೇಶಪ್ಪ ಕಡಗಟ್ಟೂರು ಎಸ್ಎಫ್ಸಿಎಸ್ ಉಪಾಧ್ಯಕ್ಷ ಡೇವಿಡ್ , ನಿರ್ದೇಶಕರಾದ ಕೆ.ಎಸ್.ಕೃಷ್ಣಪ್ಪ , ಬಿ.ಮುನಿರಾಜು , ಕೆ.ಎಂ.ವೆಂಕಟೇಶಪ್ಪ , ಡಿ.ರಾಜಣ್ಣ , ಬಿ.ವಿ.ರಾಮಾಂಜನೇಯ , ಎಂ.ಮಂಜುನಾಥ , ಅಮರೇಶ , ವಿಜಯಮ್ಮ , ಬೈರಮ್ಯಸಿಇಒ ಎನ್.ಮುನೀಶ್ವರಪ್ಪ ಮುಖಂಡರಾದ ರಮೇಶ್ ಮತ್ತಿತರರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.