ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್) : ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೆ ನನ್ನ ಕನಸು ಎಂದು ಶಾಸಕ ಕೆ.ರಮೇಶ್ ಕುಮಾರ್ ಹೇಳಿದರು .
ತಾಲ್ಲೂಕಿನ ಕಸಬಾ ಹೋಬಳಿ , ಚಲ್ಲಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಲ್ಲಿಗಾನಹಳ್ಳಿ- ಹೆಬ್ಬಟ ಸುಮಾರು 95 ಲಕ್ಷದಲ್ಲಿ ಆಗುತ್ತಿರುವ ರಸ್ತೆಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆಯನ್ನು ನೇರವೇರಿಸಿ ಮಾತನಾಡಿದ ರಮೇಶ್ ಕುಮಾರ್ ಈ ಕ್ಷೇತ್ರದ ಅಭಿವೃದ್ಧಿಯ ನನ್ನ ಕನಸ್ಸಾಗಿದ್ದು , ಪ್ರತಿಯೊಂದು ಹಳ್ಳಿಗೂ ಸುಂದರವಾದ ರಸ್ತೆ ಇರಬೇಕು . ಹಂತ – ಹಂತವಾಗಿ ಎಲ್ಲಾ ಹಳ್ಳಿಗಳೂ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುವುದು . ರಸ್ತೆಗಳು ಚೆನ್ನಾಗಿದ್ದರೆ ರೈತರು ಬೆಳೆದ ತರಕಾರಿಗಳು ಮಾರುಕಟ್ಟೆಗೆ ಹೋಗಲು ಅನುಕೂಲವಾಗುತ್ತದೆ .
ಈ ರಸ್ತೆಯಿಂದ ಸುಮಾರು 8 ಹಳ್ಳಿಗಳಿಗೆ ಅನುಕೂಲವಾಗುತ್ತದೆ . ಈಗಾಗಲೇ ಪಟ್ಟಣದ ಹೊರಗೆ ರಿಂಗ್ ರಸ್ತೆ ನಿರ್ಮಾಣವಾಗಲಿದ್ದು , ಮುಂದಿನ ದಿನಗಳಲ್ಲಿ ವಾಹನ ಸಂಚಾರ ಕಡಿಮೆಯಾಗಲಿದೆ . ಬಾರಿ ವಾಹನಗಳು ಪಟ್ಟಣದ ಒಳಗೆ ಪ್ರವೇಶಿಸುವುದಿಲ್ಲ , ರಿಂಗ್ ರೋಡ್ ಮಾಡುವುದರಿಂದ ಈ ವಾಹನಗಳು ಸುಗಮವಾಗಿ ಹೋಗುವುದಕ್ಕೆ ಅನುಕೂವಾಗುತ್ತದೆ ಎಂದರು . ಗಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು , ಈ ರಸ್ತೆಯ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದಿಂದ ಪೂರ್ಣಗೊಳಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು .
ದೇವರ ಕೃಪೆಯಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಸಂಪೂರ್ಣವಾಗಿ ಎಲ್ಲಾ ಕೆರೆಗಳು ಭರ್ತಿಯಾಗಿದ್ದು , ಇದರ ಜೊತೆಗೆ ಕೆಸಿವ್ಯಾಲಿ ನೀರು ಸಹ ಬರುತ್ತಿದ್ದು , ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು . ಇಂಜಿನೀಯರ್ , ಅನ್ವರ್ ಒಳ್ಳೆಯ ಅಧಿಕಾರಿಯಾಗಿದ್ದು , ಕೆಲಸ ಜನ್ನಾಗಿ ಮಾಡಲಿದ್ದಾರೆ ಗುತ್ತಿಗೆದಾರರಿಗೆ ಯಾವುದೇ ತೊಂದರೆ ನಮ್ಮಿಂದ ಆಗುವುದಿಲ್ಲ . ರಸ್ತೆಯನ್ನು ಸುಂದರವಾಗಿ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು .
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ . ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಎನ್ . ಜಿ . ಬ್ಯಾಟಪ್ಪ ತೆಂಗಿನ ನಾರು ಮಂಡಳಿಯ ಮಾಜಿ ನಿರ್ದೇಶಕ ಜೆ.ವಿ. ಕಾಲೋನಿ ವೆಂಕಟೇಶ್ , ಮುಖಂಡರಾದ ಪಾಳ್ಯ ಗೋಪಾಲರೆಡ್ಡಿ , ಸಂಜಯ್ರೆಡ್ಡಿ , ದ್ವಾರಸಂದ್ರ ಮುನಿವೆಂಕಟಪ್ಪ , ಶ್ಯಾಗೂತ್ತೂರು ಸುಧಾಕರ್ , ಎ.ಇಇ ನಾರಾಯಣಸ್ವಾಮಿ , ಇಂಜೀನಿಯರ್ ಅನ್ವರ್ , ಗುತ್ತಿಗೆದಾರ ರಾಜಣ್ಣ , ಪ್ರಕಾಶ್ , ಚಲಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅನಂದ್ , ಸಂಪತ್ , ವೆಂಕಟೇಶ್ , ಕೇತಗಾನಹಳ್ಳಿ ಶ್ರೀರಾಮರೆಡ್ಡಿ , ಪಟೇಲ್ ನಾರಾಯಣಸ್ವಾಮಿ , ಸಾಮಾಜಿಕ ಜಾಲತಾಣದ ತಾಲ್ಲೂಕು ಅಧ್ಯಕ್ಷ ವೇಣು , ಅಂಬೇಡ್ಕರ್ ಪಾಳ್ಯ ನರಸಿಂಹಮೂರ್ತಿ , ಶಿವಕುಮಾರ್ , ಶಿವಪುರ ಗುರಪ್ಪ , ಪಾತಪಲ್ಲಿ ದೇವರಾಜು , ಇನ್ನಿತರರು ಉಪಸ್ಥಿತರಿದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.