ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಸಲುವಾಗಿ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಮಸ್ದರ್ ಎಜ್ಯು ಆಂಡ್ ಚಾರಿಟಿ ಇದರ ಅಬುಧಾಬಿ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ನಲ್ಲಿ ನಡೆದ ಗ್ರ್ಯಾಂಡ್ ಪೈಗಾಮೇ ಪೈಗಂಬರ್ ಕಾನ್ಫರೆನ್ಸ್ನಲ್ಲಿ ಮಸ್ದರ್ ಅಬುಧಾಬಿ ನೂತನ ಪದಾಧಿಕಾರಿಗಳನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಘೋಷಿಸಿದರು.
ಅಧ್ಯಕ್ಷರಾಗಿ ಇಂಜಿನಿಯರ್ ಮನ್ಸೂರ್ ಅಹ್ಮದ್ ಮುಸಫ್ಫ ಚಿಕ್ಕಮಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಇಂಜಿನಿಯರ್ ಅರ್ಷದ್ ಅಹ್ಮದ್ ಮಂಗಳೂರು ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಂ ಖಲೀಲ್ ಕಡೂರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೆಎಚ್ ಮುಹಮ್ಮದ್ ಸಖಾಫಿ, ಮುಹಮ್ಮದ್ ಹಾಜಿ ಅಡ್ಕ, ಇಕ್ಬಾಲ್ ಕುಂದಾಪುರ, ಹಸೈನಾರ್ ಅಮಾನಿ, ಹಾಫಿಲ್ ಸಈದ್ ಹನೀಫ್, ಹಾಜಿ ಅಬ್ದುರ್ರಝಾಖ್ ಜೆಲ್ಲಿಯವರನ್ನೂ ಕಾರ್ಯದರ್ಶಿಗಳಾಗಿ ಅಬ್ದುಲ್ ಹಕೀಂ ತುರ್ಕಳಿಕೆ, ಕಬೀರ್ ಬಾಯಂಬಾಡಿ, ಎನ್ಕೆ ಸಿದ್ದೀಕ್ ಅಳಿಕೆ, ಉಮರ್ ಎಂಇ ಮುಂತಾದವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಮುಹಮ್ಮದಲಿ ಬ್ರೈಟ್ ಮಾರ್ಬಲ್, ನಿರ್ದೇಶಕರಾಗಿ ಅಬ್ದುಲ್ ಹಮೀದ್ ಸಅದಿ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಪಿಎಂಎಚ್ ಈಶ್ವರಮಂಗಲ, ಇಬ್ರಾಹಿಂ ಬ್ರೈಟ್ ಮಾರ್ಬಲ್ ರವರನ್ನು ಹಾಗೂ ಹನ್ನೊಂದು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮನ್ಸೂರ್ ಅಹ್ಮದ್ ಮುಸಫ್ಫ ಅಧ್ಯಕ್ಷತೆ ವಹಿಸಿದರು, ಇಂಡಿಯನ್ ಇಸ್ಲಾಮಿಕ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಕೇರಳ ಕಾರ್ಯಕ್ರಮದ ಉದ್ಘಾಟನೆ ಮಾಡಿದರು, ಐಮನ್ ಫೌಂಡೇಶನ್ ಅಧ್ಯಕ್ಷ ಜಮಾಲುದ್ದೀನ್, ಉದ್ಯಮಿ ದಿನೇಶ್, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಎನ್ ಕೆ ಸಿದ್ದೀಕ್ ಅಳಿಕೆ, ಕಬೀರ್ ಬಾಯಂಬಾಡಿ, ಹಕೀಂ ತುರ್ಕಳಿಕೆ, ಇಬ್ರಾಹಿಂ ಹಾಜಿ ಬ್ರೈಟ್ ಮಾರ್ಬಲ್ ಶುಭ ಹಾರೈಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ವಿಷಯ ಮಂಡನೆ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.