ಕೊಡಗು(ವಿಶ್ವಕನ್ನಡಿಗ ನ್ಯೂಸ್): ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆ ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿಯ ಮೀಲಾದುನ್ನಬಿ ಕಾನ್ಫರೆನ್ಸ್ ಅಕ್ಟೋಬರ್ 30,31 ಜರಗಲಿದ್ದು ಸಂಸ್ಥೆಯ ಅಧೀನದಲ್ಲಿರುವ ಹಾದಿಯಾ ಶರೀಅತ್ ಕಾಲೇಜ್ ನ ಹಾದಿಯಾ ಫೆಸ್ಟೀವ್ ಅಕ್ಟೋಬರ್ 28,29 ರಂದು ಹಾದಿಯಾ ಕಾಲೇಜ್ ಪ್ರಾಂಶುಪಾಲ ಸ್ವಬಾಹ್ ಹಿಮಮಿ ಸಖಾಫಿ ಅಧ್ಯಕ್ಷತೆಯಲ್ಲಿ ನಜಾತ್ ಕ್ಯಾಂಪಸ್ ನಲ್ಲಿ ಜರಗಿತು. ಹುಸೈನ್ ಮುಸ್ಲಿಯಾರ್ ಸಕಲೇಶಪುರ ದುಆ ನೆರವೇರಿಸಿದರು.
ಮೌಲಿದ್ ಮಜ್ಲಿಸ್ ನೊಂದಿಗೆ ಪ್ರಾರಂಭಗೊಂಡು 25ಕ್ಕೂ ಮಿಕ್ಕ ಸ್ಪರ್ಧೆಗಳು ನಡೆದು ಕೊನೆಯಲ್ಲಿ ಖಸೀದತುಲ್ ಬುರ್ದಾ ಮಜ್ಲಿಸ್ ನೊಂದಿಗೆ ಹಾದಿಯಾ ಫೆಸ್ಟ್ ಧನ್ಯಗೊಂಡಿತು. ಹಾದಿಯಾ ಕಾಲೇಜ್ ಮುದರ್ರಿಸ್ ಝುಬೈರ್ ಸಅದಿ ಅಲ್ ಅಫ್ಳಲಿ ಕಾರ್ಯಕ್ರಮ ನಿರೂಪಿಸಿದರು.
ಅನ್ಸೀನ ಅಲ್ ಮಾಹಿರಾ ಕಂಡಕ್ಕರ ಫೆಸ್ಟೀವ್ ಉದ್ಘಾಟಿಸಿದರು. ಸಫಾನಾ ಅಲ್ ಮಾಹಿರಾ, ತಸ್ಲೀಮ ಟೀಚರ್, ಅನ್ಸಿಯ ಟೀಚರ್, ವಿದ್ಯಾರ್ಥಿನಿಗಳು, ಪೋಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.