ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಇಶ್ಕೇ ರಸೂಲ್ ﷺ ರವರ ಜನ್ಮ ದಿನಾಚರಣೆಯ ಅಂಗವಾಗಿ ಮೀಲಾದ್ ಉರ್ದು ಕನ್ವೆನ್ಶನ್ ಆನ್ಲೈನ್ ಝೂಮ್ ಮುಖಾಂತರ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕತೆಯಲ್ಲಿ ಯಶಸ್ವಿಯಾಗಿ ಜರುಗಿತು.
ಇರ್ಫಾನ್ ಅಹ್ಮದ್ ಶರೀಫ್ ಬೆಂಗಳೂರು ಇವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರು ದುಅ ನೆರವೇರಿಸಿದರು. ಮೀಲಾದ್ ಉರ್ದು ಕನ್ವೆನ್ಶನ್ ಮುಖ್ಯ ಪ್ರಭಾಷಣ ಗಾರರಾಗಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಯ್ಯಿದ್ ಅತ಼ರ್ ಸಖಾಫಿ ಹಾವೇರಿ ಹಾಗೂ ಮುಹಮ್ಮದ್ ಮಿಹ್ರಾಜುದ್ದೀನ್ ರಝಾ ಖಾದ್ರಿ ಅಲ್- ಅಸ್ಅದಿ ಶಿವಮೊಗ್ಗ (ಇಹ್ಸಾನ್ ಕರ್ನಾಟಕ ದಾಹಿ, ಎಸ್ ಎಸ್ ಎಫ್ ಶಿವಮೊಗ್ಗ ವಲಯ ಅಧ್ಯಕ್ಷರು ಹಾಗೂ ಅಖಿಲ ಭಾರತ ಉರ್ದು ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರು) ಇವರ ನ ಅತೇ ಶರೀಫ್ ನಡೆಸಿ ಕೊಟ್ಟರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು, ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರ್ಕ ಬೊಲ್ಮಾರ್ ,ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ , ಕೋಶಾಧಿಕಾರಿ ಆರಿಫ್ ಕೋಡಿ,ಉಬೈದುಲ್ಲಾ ಸಖಾಫಿ ಮಿತ್ತೂರು, ಮುಹಮ್ಮದ್ ರಫೀಖ್ ಖಾಝಿ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮುಹಮ್ಮದ್ ಅಫ್ಫಾನ್ ಕಿರಾಅತ್ ಪಟಿಸಿದ ಕಾರ್ಯಕ್ರಮದಲ್ಲಿ ಕಲಂದರ್ ಬಾವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸುಸಿದರು. ಹನೀಫ್ ಕೆಸಿ ರೋಡ್ ವಂದಿಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.