ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೇಶಾದ್ಯಂತ ಅನೈತಿಕ ಪೊಲೀಸ್ಗಿರಿಯ ಪ್ರಕರಣಗಳು ಹೆಚ್ಚುತ್ತಿದ್ದು; ತ್ರಿಪುರಾದಲ್ಲಿ ಕೇಸರಿ ಉಗ್ರರು ಮುಸ್ಲಿಮರ ಹತ್ಯಾಕಾಂಡವನ್ನೇ ಮಾಡುತ್ತಿದ್ದರೂ ಸರಕಾರ ಯಾವುದೇ ಕ್ರಮಕೈಗೊಳ್ಳದಿರುವುದನ್ನು ಕರ್ನಾಟಕ ಎಸ್ಸೆಸ್ಸೆಫ್ ಖಂಡಿಸಿದೆ.
ಇಂತಹ ಘಟನೆಗಳಿಂದ ದೇಶದ ಘನತೆಗೆ ಕುಂದುಂಟಾಗಿದೆ. ಸರಕಾರದ ಪಕ್ಷಪಾತತನದಿಂದಾಗಿ ದೇಶಾದ್ಯಂತ ಬಲಪಂಥೀಯ ಕಿಡಿಗೇಡಿಗಳು ಸಕ್ರಿಯರಾಗುತ್ತಿದ್ದಾರೆ. ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ. ದುಷ್ಕೃತ್ಯಗಳನ್ನು ಮಟ್ಟಹಾಕುವ ಮೂಲಕ ದೇಶವನ್ನು ಜಗತ್ತಿನ ಬಲಿಷ್ಠ ಕಾನೂನು ಸುವ್ಯವಸ್ಥೆಯ ರಾಷ್ಟ್ರವನ್ನಾಗಿ ಮಾಡುವ ಹೊಣೆ ಎಲ್ಲರ ಮೇಲಿದೆ. ಸರಕಾರವು ಜವಾಬ್ದಾರಿ ಅರಿತು ಮುನ್ನಡೆಯಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.