ಕೋಲಾರ (ವಿಶ್ವ ಕನ್ನಡಿಗ ನ್ಯೂಸ್ ): ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದ ರಾಜ್ಯ ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್ ಅವರನ್ನು ಜಿಲ್ಲೆಯ ಶಿಕ್ಷಕರು , ನೌಕರರು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಜಿಲ್ಲೆಯಲ್ಲಿ ಪ್ರಭಾರಿಯಾಗಿ ಡಿಡಿಪಿಐ ಅಧಿಕಾರ ವಹಿಸಿಕೊಂಡ ನಾಗೇಶ್ ಅವರು ಕೇವಲ ೨ ತಿಂಗಳಲ್ಲಿ ತಂದ ಅಮೂಲಾಗ್ರ ಬದಲಾವಣೆ ಶ್ಲಾಘನೀಯ ಎಂದರು .
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ , ಈವರೆಗೂ ಅಧಿಕಾರ ನಡೆಸಿದ ಯಾವ ಡಿಡಿಪಿಐಗಳು ಗುರುಭವನ ನಿರ್ಮಾಣಕ್ಕೆ ಪ್ರಯತ್ನ ನಡೆಸಲಿಲ್ಲ ಆದರೆ ನಾಗೇಶ್ ಅವರು ಸಂಕಲ್ಪತೊಟ್ಟು , ಸಮಿತಿಗಳನ್ನು ರಚಿಸಿ ಈಗಾಗಲೇ ೧೦ ಸಭೆ ನಡೆಸಿದ್ದಾರೆ . ಅವರು ಜಂಟಿ ನಿರ್ದೇಶಕರಾಗಿ ಹೋಗುತ್ತಿದ್ದರೂ , ಅವರನ್ನು ಗುರುಭವನ ನಿರ್ಮಾಣ ಸಮಿತಿಯಲ್ಲಿ ಮುಂದುವರೆಯಲು ಮನವಿಮಾಡುವುದಾಗಿ ತಿಳಿಸಿದರು .
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ಡಿಡಿಪಿಐ ನಾಗೇಶ್ ಅವರಿಗೆ ಇರುವ ಬದ್ಧತೆ , ಇಚ್ಛಾಶಕ್ತಿಯಿಂದಾಗಿ ಕಳೆದ ೪೫ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನ ಕಾಮಗಾರಿ ನಡೆಸಲು ಪ್ರತಿ ಶಿಕ್ಷಕರಲ್ಲೂ ಉತ್ಸಾಹ ಬಂದಿದೆ , ಅವರು ಈ ಕಾರ್ಯಕ್ಕೆ ಪ್ರೇರಣೆ ನೀಡಿದ್ದಾರೆ ಎಂದರು .
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ , ಇಲಾಖೆ ಅಧಿಕ್ಷಕರಾದ ಮಂಜುನಾಥರೆಡ್ಡಿ , ಗೋವಿಂದಗೌಡ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ , ಇಂಚರನಾರಾಯಣಸ್ವಾಮಿ , ಟಿಪಿಒಗಳಾದ ಮದಿಅಳಗನ್ , ನಾರಾಯಣಸ್ವಾಮಿ , ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಎನ್.ಶ್ರೀನಿವಾಸಮೂರ್ತಿ , ಎಸ್.ನಾರಾಯಣಸ್ವಾಮಿ , ನಾಗರಾಜ್ , ಮಾರ್ಕಂಡೇಶ್ವರ್ , ಮುರಳಿ , ಶರಣಪ್ಪ , ಅಧಿಕಾರಿಗಳಾದ ಸುಲೋಚನಾ , ವಸಂತ , ಕೆ.ವಿ.ನಾರಾಯಣಸ್ವಾಮಿ , ಮದಿಅಳಗನ್ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.