ಕೋಲಾರ(ವಿಶ್ವ ಕನ್ನಡಿಗ ನ್ಯೂಸ್ ) : ಮನುಕುಲಕ್ಕೆ ಮಾರಕವಾಗುವ ಕುಲಾಂತರಿ ಬೀಜಗಳ ಕ್ಷೇತ್ರ ಪ್ರಯೋಗಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಬಾರದೆಂದು ರೈತ ಸಂಘದಿಂದ ಉಪ ವಿಭಾಗಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು . |ಮನುಕುಲಕ್ಕೆ ಮಾರಕವಾಗುವ ಕುಲಾಂತರಿ ಬೀಜಗಳ ಪ್ರಯೋಗಕ್ಕೆ ಅನುಮೋದನೆ ನೀಡಿದರ ದೇಶದಲ್ಲಿ ಮತ್ತೆ ರೈತ ಕಾಂತಿ ಚಳುವಳಿ ನಡೆಸುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಮಹಿಳಾ ಜಿಲ್ಲಾದ್ಯಕ್ಷೆ ಎ . ನಳಿನಿಗೌಡ ನೀಡಿದರು.
ಭಾರತದ ದೇಶದ ಪರಂಪರಿಕ ಕೃಷಿಯನ್ನೇ ನಾಶ ಮಾಡುವ ಆಹಾರ ಸಂಸ್ಕೃತಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಬಿ.ಟಿ ಕುಲಾಂತರಿ ತಂತ್ರಜ್ಞಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ಷೇತ್ರ . ಪ್ರಯೋಗ ಮಾಡಲು ಹೊರಟಿದೆ . ಈಗಾಗಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ದೇಶದಿಂದಲೇ ಈ ಪದ್ಧತಿಯನ್ನು ಒಡಿಸಿವೆ . ಆದರೆ ಭಾರತ ಮಾತ್ರ ಇದನ್ನು ಸ್ವೀಕರಿಸುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ . ಕೂಡಲೇ ಈ ಪದ್ದತಿಯನ್ನು ಕೈಬಿಟ್ಟು ಯಾವುದೇ ಕಾರಣಕ್ಕೂ ರಾಲಿಸ್ ಕಂಪನಿಗೆ ಕ್ಷೇತ್ರ ಪ್ರಯೋಗಕ್ಕೆ ಅನುಮೋದನೆ ನೀಡಬಾರದೆಂದು ಅಗ್ರಹಿಸಿದರು .
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ ಈಗಾಗಲೇ ದೇಶದಲ್ಲಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ , ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಪರಿಸ್ಥಿತಿ ಇದೆ . ಈಗ ಮತ್ತೆ ಕುಲಾಂತರಿ ಪದ್ಧತಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಿದಂತೆ ಹಣದ ದಾಹಕ್ಕೆ ದಾಸ್ಯಕ್ಕೆ ಗುಲಾಮಗಿರಿಗೆ ಸರಕಾರ ಶರಣಾಗುತ್ತಿರುವುದು ಸರಿಯಲ್ಲ , ಈ ಕುಲಾಂತರಿ ಬೀಜದ ಪದ್ಧತಿ ಭಾರತದ ಪ್ರಕೃತಿ , ಪರಿಸರ , ಆಹಾರ , ನೀರು ವಾಯು ಸಂಪೂರ್ಣವಾಗಿ ನಾಶವಾಗುತ್ತವೆ. ಜೊತೆಗೆ ಇಡೀ ಮನುಕುಲಕ್ಕೆ ತೊಂದರೆಯಾಗುತ್ತದೆಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು . ಯುರೋಪ್ನ 28 ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ ಮತ್ತು ನಮ್ಮ ದೇಶದ ಕೇರಳ ತಮಿಳುನಾಡು ಬಿಹಾರ ಪಶ್ಚಿಮ ಬಂಗಾಳ , ಮದ್ಯಪ್ರದೇಶ , ಒರಿಸ್ಸಾ , ಛತ್ತೀಸ್ಗಡ್ , ಗುಜರಾತ್ , ರಾಜ್ಯಗಳು ಈ ಪದ್ದತಿಯನ್ನು ವಿರೋದಿಸಿವೆ .
ಕರ್ನಾಟಕ ಸರ್ಕಾರವೂ ಸಹ ಈ ಪದ್ಧತಿಯನ್ನು ತಿರಸ್ಕರಿಸಬೇಕು . ಒಂದು ವೇಳೆ ಇದನ್ನು ಪ್ರಯೋಗ ಮಾಡಲು ಅನುಮತಿ ನೀಡಿ ಜಾರಿ ಮಾಡಲು ಹೊರಟರೆ ಇಡೀ ದೇಶದ ಬೃಹತ್ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು .
ಮನವಿ ಸ್ವೀಕರಿಸಿದ ಉಪವಿಭಾಗಧಿಕಾರಿಗಳಾದಆನಂದ್ ಪ್ರಕಾಶ್ ಮೀನಾ ರವರು ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು . ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ , ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ , ಕೆ.ಶ್ರೀನಿವಾಸಗೌಡ , ಬಂಗವಾದಿ ನಾಗರಾಜ್ಗೌಡ , ಮೂರಂಡಹಳ್ಳಿ ಶಿವಾರಡ್ಡಿ , ಯಲ್ಲಪ್ಪ , ಹರೀಶ್ , ಹ.ಸೆ.ಜಿಲ್ಲಾಧ್ಯಕ್ಷ ಕಿರಣ್ , ರಾಮಕೃಷ್ಣಪ್ಪ , ಚಂದ್ರಪ್ಪ , ಮಂಗಸಂದ್ರ ನಾಗೇಶ್ , ತಿಮ್ಮಣ್ಣ , ಅಶ್ವಥಪ್ಪ , ನಳಿನಿ.ವಿ , ಚೌಡಮ್ಮ , ಹೆಬ್ಬಣಿ ಆನಂದರೆಡ್ಡಿ , ಸುಪ್ರೀಂಚಲ , ಚಾಂದ್ಪಾಷ , ಕೆಹಳ್ಳಿ ಆಂಜಿನಪ್ಪ , ರಾಮಕೃಷ್ಣಪ್ಪ , ಚೆನ್ನಬಸಪ್ಪ , ಮುನಿಯಮ್ಮ , ಶಾಂತಮ್ಮ , ನಾಗವೇಣಿ , ಭಾಗ್ಯ , ಮುಂತಾದವರು ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.