ಕೋಲಾರ (ವಿಶ್ವ ಕನ್ನಡಿಗ ನ್ಯೂಸ್ ) ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022 ಕಾರ್ಯಕ್ರಮವನ್ನು ನವೆಂಬರ್ 08 ರಿಂದ ಡಿಸೆಂಬರ್ 08 ರವರೆಗೆ ಹಮ್ಮಿಕೊಳ್ಳಲಾಗಿದ್ದು , ಮತದಾರರ ಪಟ್ಟಿಗೆ ಸೇರ್ಪಡೆ , ಬಿಡತಕ್ಕವುಗಳು ಮತ್ತು ತಿದ್ದುಪಡಿಗಳನ್ನು ಮಾಡಲಾಗುವುದು , ಜನವರಿ 01,2022 ಕ್ಕೆ 18 ವರ್ಷ ವರ್ಷ ತುಂಬುವ ಯುವಕ ಯವತಿಯರು ಮತದಾರರ ಪಟ್ಟಿಗೆ ಮೊದಲ ಬಾರಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ತಿಳಿಸಿದರು .
ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022 ರ ಕಾರ್ಯಕ್ರಮದ ಅನುಷ್ಠಾನ ಹಾಗೂ ನಿರ್ವಹಿಸುವ ಕಾರ್ಯ ಚಟುವಟಿಕೆಗಳ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ಸಾರ್ವಜನಿಕರು ಭಾರತ ಚುನಾವಣಾ ಆಯೋಗದ Voter Helpline App ಮೂಲಕ ನಮೂನೆ 6 , 7 , 8 ಮತ್ತು 8 ಎ ಅರ್ಜಿಗಳನ್ನು ಆನ್ಲೈನ್ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಹಾಗೂ ಮುಖ್ಯ ಚುನಾವಣಾಧಿಕಾರಿಗಳು , ಕರ್ನಾಟಕ ಬೆಂಗಳೂರು ರವರವೆಬ್ಸೈಟ್ http://www.voterreg.kar.nic.in ಹಾಗೂ http://www.nvsp. ರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು .
ಸಾರ್ವಜನಿಕರು ನಮೂನೆ -6 ಸೇರ್ಪಡೆಗಾಗಿ ಮತ್ತು ನಮೂನೆ -8 ತಿದ್ದುಪಡಿಗಾಗಿ ಸಲ್ಲಿಸವಾಗ ಹಟ್ಟಿದ ದಿನಾಂಕದ ಆಧಾರಕ್ಕಾಗಿ ಜನನ ಮತ್ತು ಮರಣ ನೋಂದಣಾಧಿಕಾರಿಗಳಿಂದ ನೀಡುವ ಜನನ ಪ್ರಮಾಣ ಪತ್ರ , ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ಚಾಲನ ಪರವಾನಿಗೆ , 10 ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ ಅಂಕಪಟ್ಟಿ ಅಥವಾ ಭಾರತದ ಪಾಸ್ಪೋರ್ಟ್ ಮತ್ತು ನಿವಾಸದ ಆಧಾರಕ್ಕಾಗಿ ಅದೇ ವಿಳಾಸವುಳ್ಳ ಕನಿಷ್ಠ 1 ವರ್ಷ ನೀರು , ವಿದ್ಯುತ್ , ಗ್ಯಾಸ್ ಸಂಪರ್ಕ ಬಿಲ್ , ಆಧಾರ್ ಕಾರ್ಡ್ , ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್ ಬುಕ್ ಅಥವಾ ಪೋಸ್ಟ್ ಆಫೀಸ್ ಪುಸ್ತಕ , ಭಾರತದ ಪಾಸ್ಪೋರ್ಟ್ , ನೋಂದಾಯಿತಿ ಬಾಡಿಗೆ ಕರಾರು ಪತ್ರ ಹಾಗೂ ನೋಂದಾಯಿತಿ ಮಾರಾಟ ಕರಾರು ಪತ್ರ ಇವುಗಳಲ್ಲಿ ಯಾವುದಾದರು ಒಂದು ದಾಖಲೆಗಳನ್ನು ನೀಡಬೇಕು ಎಂದು ಅವರು ತಿಳಿಸಿದರು .
ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿಕೊಳ್ಳದೇ ಇರುವವರು ನಮೂನೆ 6 ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು . ಮತದಾರರ ಪಟ್ಟಿಯಲ್ಲಿ ವಿವರಗಳು ತಪ್ಪಿದ್ದಲ್ಲಿ ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು .
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮತ ಪ್ರದೇಶದ ವರ್ಗಾವಣೆ ಬಯಸುವವರು ನಮೂನೆ 8 ಎ ರಲ್ಲಿ ಅರ್ಜಿ ಸಲ್ಲಿಸಿ ವರ್ಗಾವಣೆ ಮಾಡಿಕೊಳ್ಳಬಹುದು . ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದಿರುವವರು ನಮೂನೆ 8 ರೊಂದಿಗೆ ಭಾವಚಿತ್ರ ಸಹಿತ ಅರ್ಜಿ ಸಲ್ಲಿಸಬಹುದು . ಮೃತ ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡಿರುವವರು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7 ರಲ್ಲಿ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು .
ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಭಾನುವಾರಗಳಾದ ನವೆಂಬರ್ 07 , 14 , 21 ಮತ್ತು 28 ರಂದು ನಡೆಸಲಾಗುವುದು . ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಮತಗಟ್ಟೆ ಹಂತದ ಅಧಿಕಾರಿಗಳು ತಮ್ಮ ಮತಗಟ್ಟೆಗಳಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಉಪಸ್ಥಿತರಿರುತ್ತಾರೆ . ಹೆಚ್ಚಿನ ಸಹಕಾರ ಮತ್ತು ಮಾಹಿತಿಗಾಗಿ ಸಂಬಂಧಪಟ್ಟ ಮತಗಟ್ಟೆ ಪ್ರದೇಶದ ಬಿ.ಎಲ್.ಒ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿಯನ್ನು ಸಾರ್ವಜನಿಕರು ಸಂಪರ್ಕಿಸಬೇಕು ಎಂದು ಅವರು ತಿಳಿಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.