ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ 11 ನೇ ವಾರ್ಡಿನ ಕಸ ವಿಲೇವಾರಿಗಾಗಿ ಕಬ್ಬಿಣ್ಣದ ತಳ್ಳುವ ಗಾಡಿ ಹಾಗೂ ಕಸದ ಡಬ್ಬಾಗಳನ್ನು ನೀಡುವ ಮೂಲಕ ಮಾಲೂರಿನ ಪುರಸಭಾ ಸದಸ್ಯರಾದ ಎಂ.ವಿ.ವೇಮನ ಮಾಲೂರು ಪಟ್ಟಣ್ಣದ ಸ್ವಚ್ಚತೆಗಾಗಿ ನಮ್ಮ ಕೆಲಸ ಎಂಬ ಆಶಯದಿಂದ ಉತ್ತಮ ಕಾರ್ಯ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ 11 ನೇ ವಾರ್ಡಿನ ಪುರಸಭಾ ಸದಸ್ಯರಾದ ಎಂ.ವಿ.ವೇಮನ ರವರು ಮಾತನಾಡಿ ”ಪಟ್ಟಣ್ಣದಲ್ಲಿ ಕಸ, ಕಡ್ಡಿ ಹಾಗೂ ಘನತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ಹಾಗೂ ನಮ್ಮ ವಾರ್ಡಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿತ್ಯ ಬಳಸುವ ಘನ ತ್ಯಾಜ್ಯ ವಸ್ತುಗಳನ್ನು ವಾರ್ಡ್ ನಲ್ಲಿರುವ ನಿವಾಸಿಗಳು ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ಕಸದ ಡಬ್ಬಾಗಳಲ್ಲಿ ಹಾಕುವ ಮೂಲಕ ಸ್ವಚ್ಚತೆ ಕಾಪಾಡಿಕೊಳ್ಳುವ ಹಾಗೂ ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳುವ ಕಾರ್ಯ ಆಗಲಿ ಎಂಬ ಆಶಾಭಾವನೆ ನಮ್ಮದು” ಎಂದರು
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು, ಸ್ವಚ್ಚತೆಯ ಮೂಲಕ ಎಲ್ಲಾರ ಪ್ರೀತಿ ಪಾತ್ರರಾಗಿರುವ ಹೆಮ್ಮೆಯ ಪೌರಕಾರ್ಮಿಕರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.