ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಬೆಳಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಭಾರೀ ವಿರೋಧ ಎದುರಿಸಿದ ಮೂರು ಕಾನೂನುಗಳನ್ನು ಹಿಂಪಡೆಯಲಾಗುತ್ತಿದೆ. ರೈತರ ಕಾನೂನುಗಳ ವಿರುದ್ಧದ ಧರಣಿಯನ್ನು ಕೊನೆಗೊಳಿಸುವಂತೆ ಮೋದಿ ರೈತರನ್ನು ಒತ್ತಾಯಿಸಿದರು.
#WATCH | PM Narendra Modi says, "Whatever I did, I did for farmers. What I'm doing, is for the country. With your blessings, I never left out anything in my hard work. Today I assure you that I'll now work even harder, so that your dreams, nation's dreams can be realised." pic.twitter.com/pTWTEAut4P— ANI (@ANI) November 19, 2021
#WATCH | PM Narendra Modi says, "Whatever I did, I did for farmers. What I'm doing, is for the country. With your blessings, I never left out anything in my hard work. Today I assure you that I'll now work even harder, so that your dreams, nation's dreams can be realised." pic.twitter.com/pTWTEAut4P
ರೈತರ ಧರಣಿ ನಡೆಸುತ್ತಿರುವ ಸಂಘಟನೆಗಳನ್ನು ಕಟುವಾಗಿ ಟೀಕಿಸುವ ಮೂಲಕ ಪ್ರಧಾನಿ ಈ ಮಹತ್ವದ ಘೋಷಣೆ ಮಾಡಿದರು. ಪ್ರಾಮಾಣಿಕವಾಗಿ ತಂದ ಕಾನೂನುಗಳು ರೈತರ ಒಂದು ವರ್ಗದ ಅಸಮಾಧಾನಕ್ಕೆ ಕಾರಣವಾಗಿವೆ. ರೈತರ ಕಷ್ಠಗಳನ್ನು ಅರಿದು ದೇಶದ ರೈತರ ನೋವು ಅರ್ಥ ಮಾಡಿಕೊಳ್ಳಲು ಕಾನೂನು ತರಲಾಗಿದೆ. ರೈತರ ಕಲ್ಯಾಣಕ್ಕೆ ಯಾವಾಗಲೂ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.