ಕೋಲಾರ(ವಿಶ್ವಕನ್ನಡಿಗ ನ್ಯೂಸ್): 2021-22ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ CET / NEET ವೃತ್ತಿಪರ ಕೋರ್ಸ್ಗಳಲ್ಲಿ ಅಂದರೆ ವೈದ್ಯಕೀಯ , ( ಎಂ.ಬಿ.ಬಿ.ಎಸ್ . ) ಹಾಗೂ ಬಿ.ಡಿ.ಎಸ್ . , ಬಿ.ಇ. / ಬಿ.ಟೆಕ್ , ಬ್ಯಾಚುಲರ್ ಆಪ್ ಆರ್ಕಿಟೆಕ್ಟರ್ ಮತ್ತು ಆಯುಶ್ ಇಂತಹ ಪದವಿ ಕೋರ್ಸ್ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ರಿನಿವಲ್ ( ArivuRenewl ) ಸಾಲ ಯೋಜನೆಯಡಿ ( ವಿದ್ಯಾಭ್ಯಾಸ ಸಾಲ ) ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಆನ್ಲೈನ್ ವೆಬ್ ಸೈಟ್ kmdconline.karnataka.gov.in ಮೂಲಕ ಡಿಸೆಂಬರ್ 20 ರೊಳಗಾಗಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯ ಹಾರ್ಡ್ ಕಾಪಿಗಳನ್ನು Indemnity Bond ಮತ್ತು ಇತರೆ ಮೂಲ ದಾಖಲಾತಿಗಳೊಂದಿಗೆ ಡಿಸೆಂಬರ್ 31 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ , ಮೊದಲನೇ ಮಹಡಿ , ಮೌಲಾನಾ ಅಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ವಾರ್ಡ್ ನಂ 01 , ಟಮಕ , ದೂರವಾಣಿ ಸಂಖ್ಯೆ 08152-200786 , 8277799990 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.