ದುಬೈ(www.vknews.in): ಅಬುಧಾಬಿಯ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಮಿತಿಯ ಅಧೀನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಝೀ ನ್ಯೂಸ್ ನ ಸುಧೀರ್ ಚೌಧರಿಯನ್ನು ಅತಿಥಿಯಾಗಿ ಆಹ್ವಾನಿಸಿದ್ಜಕ್ಕೆ ಪ್ರತೀಕಾರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಯುಎಇಯ ವಿದೇಶಾಂಗ ವ್ಯವಹಾರದ ರಾಜ್ಯ ಸಚಿವರಾದ ಥಾನಿ ಬಿನ್ ಅಹ್ಮದ್ ಅಲ್ ಝಿಯೋದಿ ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
ಭಾರತದ ಮುಸಲ್ಮಾನರ ವಿರುದ್ಧ ಸತತವಾಗಿ ಕಿಡಿಕಾರುತ್ತಾ ಭಾರತದಲ್ಲಿ ಇಸ್ಲಾಮೋಫೋಬಿಯ ಹರಡುತ್ತಿರುವ ಸುಧೀರ್ ಚೌಧರಿಯನ್ನು ಕೈಬಿಡುವಂತೆ ಶಾರ್ಜಾ ರಾಜಕುಮಾರಿ ಹಿಂದ್ ಬಿಂತ್ ಫೈಸಲ್ ಅಲ್ ಖಾಸಿಮಿಯವರು ಸತತ ಮನವಿ ಮಾಡಿದ ಹೊರತಾಗಿಯೂ ಚೌಧರಿಯನ್ನು ಅಹ್ವಾನಿಸಿರುವುದಕ್ಕೆ ರಾಜಕುಮಾರಿ ಕೆಂಡಾಮಂಡಲವಾಗಿದ್ದು, ಒಂದು ವೇಳೆ ಚೌಧರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಾರರೆಂದು ಹಿಂದ್ ಟ್ವೀಟ್ ಮಾಡಿದ್ದಾರೆ.
H.E. Thani bin Ahmed Al Zeyoudi the present Minister of State for Foreign Trade of the United Arab Emirates who was invited to the event has DECLINED to attend the Abu Dhabi Chartered Accountants Event. @icaiauh #NoIslamophobesWelcome pic.twitter.com/zRLcqVaEJm— Hend F Q (@LadyVelvet_HFQ) November 24, 2021
H.E. Thani bin Ahmed Al Zeyoudi the present Minister of State for Foreign Trade of the United Arab Emirates who was invited to the event has DECLINED to attend the Abu Dhabi Chartered Accountants Event. @icaiauh #NoIslamophobesWelcome pic.twitter.com/zRLcqVaEJm
ಮಾತ್ರವಲ್ಲ ಈ ಘಟನೆಯಿಂದ ಯುಎಇಯಲ್ಲಿರುವ ಭಾರತದ ಚಾರ್ಟೆರ್ಡ್ ಅಕೌಂಟೆಂಟ್ ಗಳಿಗೆ “ನಾಚಿಕೆಯಾಗಬೇಕೆಂದು” ಟ್ವೀಟಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.