ಜೆದ್ದಾ(www.vknews.in): ಆರೋಗ್ಯ ಸಚಿವಾಲಯದ ವಕ್ತಾರ ಡಾ ಮೊಹಮ್ಮದ್ ಅಬ್ದುಲ್ ಅಲಿ ಹೇಳಿಕೆಯಲ್ಲಿ “ಇನ್ಶಾ ಅಲ್ಲಾಹ್, ಬೀಝಿನಿಲ್ಲಾಹ್ (ದೇವನ ಇಚ್ಚೆಯಿಂದ) ನಾವು ಸೌದಿ ಅರೇಬಿಯಾದಲ್ಲಿ ಲಾಕ್ಡೌನ್ಗೆ ಹಿಂತಿರುಗುವುದಿಲ್ಲ” ಎಂದು ಹೇಳಿದರು.
ಅಲ್ ಇಕ್ಬಾರಿಯಾದಲ್ಲಿ ಅಲ್ ರಾಸ್ವಿದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಲಿ ‘ ಆರಂಭಿಕ ಹಂತಗಳಲ್ಲಿ, ವೈರಸ್ಗಳು ಅಥವಾ ರೂಪಾಂತರಗಳು ಜಗತ್ತಿನಲ್ಲಿ ಕಾಣಿಸಿಕೊಂಡಾಗ, ಭಯವು ಹೆಚ್ಚಾಗಿರುತ್ತದೆ. ಆದರೆ ಈಗ ಜನರಲ್ಲಿ ಅರಿವು ಬೆಳೆದು ಲಸಿಕೆಗಳು ಲಭ್ಯವಾಗಿರುವುದರಿಂದ ಇಂತಹ ಆತಂಕ ದೂರವಾಗಿದೆ’ ಎಂದರು.
ಸೌದಿಯಲ್ಲಿ ಇನ್ನೂ ಲಸಿಕೆ ಹಾಕಿಸಿಕೊಳ್ಳದಿರುವವರು ಮತ್ತು ವಿವಿಧ ಕಾರಣಗಳಿಂದ ಲಸಿಕೆ ಹಾಕಲು ಸಾಧ್ಯವಾಗದ ಜನರು ಇದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಇನ್ನೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.