ಜೆದ್ದಾ(www.vknews.in): ಸೌದಿ ಅರೇಬಿಯಾದಿಂದ ಅನುಮೋದಿಸಲ್ಪಟ್ಟ ಯಾವುದಾದರೊಂದು ಕೊವಿಡ್ ವ್ಯಾಕ್ಸಿನ್ ನ ಎರಡೂ ಡೋಸ್ ಪಡೆದು ಉಮ್ರಾ ನಿರ್ವಹಿಸಲು ಮಕ್ಕಾಗೆ ಆಗಮಿಸುವ ವಿದೇಶಿಗಳಿಗೆ ಸೌದಿ ಅರೇಬಿಯಾದಲ್ಸಿ ಯಾವುದೇ ಕ್ವಾರೆಂಟೈನ್ ಕಡ್ಜಾಯವಿಲ್ಲ ಎಂದು ಸೌದಿ ಹಜ್ ಹಾಗೂ ಉಮ್ರಾ ಮಂತ್ರಾಲಯ ಸ್ಪಷ್ಟಪಡಿಸಿದೆ.
ಡಿ. 1 ರಿಂದ ಭಾರತೀಯರಿಗೆ ನೇರವಾಗಿ ಸೌದಿಗೆ ಪ್ರಯಾಣ ಮಾಡಬಹುದಾಗಿದ್ದು, ಅದಾಗ್ಯೂ ಸೌದಿಯಿಂದ ಹೊರಗೆ ವ್ಯಾಕ್ಸಿನ್ ಪಡೆದ ವಿದೇಶಿಗಳಿಗೆ ಸೌದಿ ಪ್ರವೇಶಿಸಿದ ನಂತರ ಐದು ದಿನಗಳ ಇನ್ಶ್ಟಿಟ್ಯೂಷನಲ್ ಕ್ವಾರೆಂಟೈನ್ ಕಡ್ಜಾಯವಾಗಿದ್ದು, ಈ ನಿಯಮ ಉಮ್ರಾ ಯಾತ್ರಾರ್ಥಿಗಳಿಗೆ ಅನ್ವಯಿಸುವುದಿಲ್ಲ. ಭಾರತದ ಕೊವಿಶೀಲ್ಡ್ ಅಥವಾ ಫೈಝರ್ ಲಸಿಕೆಯ ಎರಡೂ ಡೋಸ್ ಪಡೆದು ಉಮ್ರಾ ನಿರ್ವಹಿಸಲು ಆಗಮಿಸುವ ಯಾತ್ರಾರ್ಥಿಗಳಿಗೆ ಸೌದಿಯಲ್ಲಿ ಯಾವುದೇ ಕ್ವಾರೆಂಟೈನ್ ಅಗತ್ಯವಿರುವುದಿಲ್ಲ. ಸದ್ಯ ಭಾರತದ ಕೊವಿಶೀಲ್ಡ್ ಲಸಿಕೆ ಮಾತ್ರ ಸೌದಿ ಅರೇಬಿಯಾ ಅಂಗೀಕರಿಸಿದ್ದು, ಕೊವಾಕ್ಸಿನ್ ಗೆ ಇನ್ನೂ ಅಂಗೀಕಾರ ಲಭಿಸಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.