ದುಬೈ (www. vknews.com) : ಕರ್ನಾಟಕ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (KSCC) ಯುಎಇ ಡಿಸೆಂಬರ್ 24 ರಂದು ಮೆಗಾ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿದೆ.
ಇದು ನಮ್ಮ ಸ್ಥಳೀಯ ಕ್ರೀಡಾ ತಂಡವನ್ನು ಬೆಳೆಸಲು ಸಹಾಯ ಮಾಡುತ್ತದೆ ಮತ್ತು ಯುಎಇ ನಿವಾಸಿಗಳಿಗೆ ದೈಹಿಕವಾಗಿ ಆರೋಗ್ಯ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಡಿಸೆಂಬರ್ 24, 2021 ರಂದು ದುಬೈನ ಅವಿರ್ ರಸ್ತೆಯಲ್ಲಿರುವ ಶಬಾಬ್ ಅಲ್ ಅಹ್ಲಿ ಕ್ಲಬ್ ನಲ್ಲಿ ಈ ಪಂದ್ಯಾಕೂಟವನ್ನು ನಡೆಸಲಾಗುತ್ತದೆ.
ಈ ಪಂದ್ಯಾವಳಿಯನ್ನು ‘ದುಬೈ 30X30 ಫಿಟ್ನೆಸ್ ಚಾಲೆಂಜ್’ ಮತ್ತು ದೇಶದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನವಾಗಿ 5000 ಎಮಿರೇಟ್ಸ್ ದಿರ್ಹಮ್ ಮತ್ತು ದ್ವಿತೀಯ ವಿಜಯಿ ತಂಡಕ್ಕೆ 2500 ಎಮಿರೇಟ್ಸ್ ದಿರ್ಹಮ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಸಾಮಾಜಿಕ ಮಾಧ್ಯಮ ಪುಟ KSCC UAE (ಫೇಸ್ಬುಕ್, Instagram ಮತ್ತು Twitter) ಗೆ ಭೇಟಿ ನೀಡಬಹಿದಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.