ಜೆದ್ದಾ(www.vknews.in): ಸೌದಿ ಆರೋಗ್ಯ ಮಂತ್ರಾಲಯದ ಅಧಿಕೃತ ಘೋಷಣೆಯ ಪ್ರಕಾರ ಕೊವಿಡ್ ವ್ಯಾಕ್ಸಿನ್ ನ ಎರಡನೇ ಡೋಸ್ ಪಡೆದ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಇನ್ನು ಮುಂದೆ ಸೌದಿ ನಾಗರೀಕರು ಹಾಗೂ ವಿದೇಶಿಗಳು ಬೂಸ್ಟರ್ ಡೋಸ್ ಗಾಗಿ ಎರಡನೇ ಡೋಸ್ ಪಡೆದು ಆರು ತಿಂಗಳು ಕಾಯಬೇಕಾಗಿಲ್ಲ.
ಎರಡನೇ ಡೋಸ್ ಪಡೆದು ಮೂರು ತಿಂಗಳು ಪೂರ್ತಿಯಾದವರಿಗೆ ‘ಸೆಹತಿ’ ಆ್ಯಪ್ ಮೂಲಕ ಅಥವಾ ‘ತವಕ್ಕಲ್ನಾ’ ಮೂಲಕ ಬೂಸ್ಟರ್ ಡೋಸ್ ಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ. ಫೆಬ್ರವರಿ ಬಳಿಕ ಬೂಸ್ಟರ್ ಡೋಸ್ ಪಡೆಯದ ಪ್ರಜೆಗಳು ಹಾಗೂ ವಿದೇಶಿಗಳ ‘ಇಮ್ಯೂನ್’ ಸ್ಟೇಟಸ್ ರದ್ದುಗೊಳಿಸುವುದಾಗಿಯೂ, ಹೀಗೆ ಇಮ್ಯೂನ್ ಸ್ಟೇಟಸ್ ರದ್ದುಗೊಂಡವರಿಗೆ ಸಾರ್ವಜನಿಕ ಸ್ಥಳಗಳು, ಸರಕಾರಿ ಕಚೇರಿಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು ಸೇರಿದಂತೆ ಬಹುತೇಕ ಸ್ಥಳಗಳಿಗೆ ಪ್ರವೇಶ ನಿರಕರಿಸಲಾಗುವುದೆಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.