ವಾಮದಪದವು(ವಿಶ್ವಕನ್ನಡಿಗ ನ್ಯೂಸ್): ಬಂಟ್ವಾಳ ತಾಲೂಕಿನ ಇರ್ವತ್ತೂರುಪದವು ಗ್ರಾಮದ ಫರಾರಿ ಎಂಬ ಪ್ರದೇಶದಲ್ಲಿ ಸುಮಾರು 450 ವರುಷ ಇತಿಹಾಸ ಇರುವ, ಪ್ರಕೃತಿಯ ಮಡಿಲಲ್ಲಿ ಶಾಂತ ಸ್ಥಿತಿಯ ಸೌಹಾರ್ದತೆಯ ಸಂಕೇತ ಬೀರುವ ಅತ್ಯಂತ ನಂಬಿಕೆಯ ಮಸೀದಿಯಲ್ಲಿ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ಮಸ್ಜಿದ್ ಎ ಆಝಾಮ್ ಫರಾರಿ ಮತ್ತು ಅಲ್ ಹುದಾಃ ಯಂಗ್ ಮೆನ್ಸ್ ಫರಾರಿ, ಇರ್ವತ್ತೂರುಪದವು ಇದರ ಜಂಟಿ ಆಶ್ರಯದಲ್ಲಿ ದಿನಾಂಕ 1 ಜವನರಿ 2022 ರ ಶನಿವಾರ ಮಗ್ರಿಬ್ ನಮಾಜಿನ ನಂತರ ನಡೆಯಿತು.
ಕಾರ್ಯಕ್ರಮದ ದ್ಸಿಕ್ರ್ ನೇತೃತ್ವವನ್ನು ಬಹು| ಡಾ. ಮುಹಮ್ಮದ್ ಫಾಝಿಲ್ ರಝ್ವಿ, ಚೇರ್ಮ್ಯಾನ್ ಅಲ್ ಖಾದಿಸ ಕಾವಳಕಟ್ಟೆ ವಹಿಸಿಕೊಂಡರು ಹಾಗೂ ಬಹು| ಅಬ್ದುರ್ರಹ್ಮಾನ್ ಸಾದಾತ್ ತಂಗಳ್ ಬಾ-ಅಲವಿ, ಸಹಾಯಕ ಖಾಝಿ ಬೆಳ್ತಂಗಡಿ ಸಂಯುಕ್ತ ಜಮಾತ್ ಇವರು ದುವಾಃ ಆಶೀರ್ವಚನಗೈದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಸ್ಜಿದ್ ಎ ಆಝಾಮ್ ಫರಾರಿ ಇದರ ಇಮಾಂರಾದ ಬಹು| ಮುಹಮ್ಮದ್ ಮುಹ್ಸಿನ್ ರಝಾ ಮಾಡಿದರು ಹಾಗೂ ಅಧ್ಯಕ್ಷತೆಯನ್ನು ಜನಾಬ್ ರಹ್ಮತುಲ್ಲಾ ಮಸ್ಜಿದ್ ಎ ಆಝಾಮ್ ಫರಾರಿ ಇದರ ಅಧ್ಯಕ್ಷರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಹು। ಉಮರ್ ಮದನಿ, ಖತೀಬರು ಬಿ.ಜೆ.ಎಂ ಇರ್ವತ್ತೂರುಪದವು, ಬಹು| ಅಬ್ದುಲ್ ಅಝೀಝ್ ಅಮ್ಜದಿ, ಖತೀಬರು ಬಿ.ಜೆ.ಎಂ ಮಾವಿನಕಟ್ಟೆ, ಬಹು| ಅಹ್ಮದ್ ರಝಾ, ಇಮಾಂ ಕಮರುಲ್ ಇಸ್ಲಾಂ ಮಸ್ಜಿದ್ ಮತ್ತು ಮದ್ರಸ ಕಲಾಬಾಗಿಲು, ಬಹು| ಅಬ್ದುರ್ರಹ್ಮಾನ್ ಹುಮೈದಿ, ಇಮಾಂ ಆಲದಪದವು ಮಸ್ಜಿದ್, ಬಹು| ಶರೀಕ್ ಆಲಂ, ಮುಅಲ್ಲಿಂ ಮಸ್ಜಿದ್ ಎ ಆಝಾಮ್ ಫರಾರಿ, ಜನಾಬ್ ನಝೀರ್ ಸಾಹೆಬ್, ಉಪಾಧ್ಯಕ್ಷರು ಮಸ್ಜಿದ್ ಎ ಆಝಾಮ್ ಫರಾರಿ, ಜನಾಬ್ ಎಸ್.ಪಿ ರಫೀಕ್, ಸೇವಕರು ಬಿ.ಜೆ.ಎಂ ಇರ್ವತ್ತೂರುಪದವು, ಜನಾಬ್ ಅಬ್ದುಲ್ ರಝಾಕ್, ಅಧ್ಯಕ್ಷರು ಬಿ.ಜೆ.ಎಂ ಮಾವಿನಕಟ್ಟೆ, ಜನಾಬ್ ರಶೀದ್ ನೇರಳಕಟ್ಟೆ, ಅಧ್ಯಕ್ಷರು ಕಮರುಲ್ ಇಸ್ಲಾಂ ಮಸ್ಜಿದ್ ಮತ್ತು ಮದ್ರಸ ಕಲಾಬಾಗಿಲು, ಜನಾಬ್ ಹಂಝ ಬಸ್ತಿಕೋಡಿ, ಅಧ್ಯಕ್ಷರು ಆಲದಪದವು ಮಸ್ಜಿದ್ ಹಾಗೂ ಜನಾಬ್ ಎಸ್.ಎಮ್ ವಸೀಮ್, ಅಧ್ಯಕ್ಷರು ಅಲ್ ಹುದಾ ಯಂಗ್ ಮೆನ್ಸ್ ಫರಾರಿ, ಇರ್ವತ್ತೂರುಪದವು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಎಸ್.ಪಿ.ರಹಿಮಾನ್ ಇರ್ವತ್ತೂರುಪದವು ಹಾಗೂ ಅಝರ್ ಪಂಜೋಡಿ ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದವನ್ನು ನೆರೆವೇರಿಸಿದರು.
ಕಾರ್ಯಕ್ರಮದ ನೇರಪ್ರಸಾರವನ್ನು Al-Ameen Media ಇದರಲ್ಲಿ ಪ್ರಸಾರ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.