ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ನ ರಾಫೆಲ್ ಡ್ರಾ ಸರಣಿ 235 ರಲ್ಲಿ ಅಬುಧಾಬಿ ಮೂಲದ ಭಾರತೀಯ ವಲಸಿಗ 25 ಮಿಲಿಯನ್ ದಿರ್ಹಾಂ ಗೆದ್ದಿದ್ದಾರೆ.
ಎಮಿರೇಟ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಹರಿದಾಸನ್ ಮೂತ್ತತ್ತಿಲ್ ವಾಸುನ್ನಿ ಅವರು ಬಿಗ್ ಟಿಕೆಟ್ನ ಅತಿದೊಡ್ಡ ಜಾಕ್ಪಾಟ್ ಅನ್ನು ಗೆದ್ದ ಅದ್ರಷ್ಟವಂತ.
“ಇದು ನಂಬಲಸಾಧ್ಯ. ಏನು ಹೇಳಬೇಕೆಂದು ನನಗೆ ಇನ್ನೂ ತಿಳಿದಿಲ್ಲ. ನಾನು ಮಾತನಾಡಲು ಸಾಧ್ಯವಿಲ್ಲ. ನಾನೀಗ ಸರಿಯಾದ ಚೌಕಟ್ಟಿನಲ್ಲಿಲ್ಲ. ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ, ”ಎಂದು ಹರಿದಾಸನ್ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಹರಿದಾಸನ್ ಕೇರಳದ ಮಲಪ್ಪುರಂ ಜಿಲ್ಲೆಯವರು ಮತ್ತು ಕಳೆದ ಒಂದು ದಶಕದಿಂದ ಅಬುಧಾಬಿ ಮತ್ತು ಅಲ್ ಐನ್ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಮುಸ್ಸಾಫ ಇಂಡಸ್ಟ್ರಿಯಲ್ ಏರಿಯಾದ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.