(www.vknews.com) : ಶ್ರೀ ಸುಶಾಂತ್ ಎನ್ ಕೆ ಅಡೂರು ಇವರು ಸಮರ್ಪಿಸಿದ ‘ಕಂಪಾರಿಟಿವ್ ಸ್ಟಡಿ ಓನ್ ದ ಥೆರಾಪೆಟಿಕ್ ಪೊಟೆನ್ಶಿಯಲ್ ಓಫ್ ಅಲೊವೇರಾ ಏಂಡ್ ಅಪಿಯಮ್ ಗ್ರೇವಿಯೋಲೆನ್ಸ್ ಸಪ್ಲಿಮೆಂಟೆಡ್ ವಿದ್ ಝಿಂಕ್ ಓನ್ ಇಫೆಕ್ಟ್ಸ್ ಓಫ್ ಕ್ಯಾಡ್ಮಿಯಮ್ ಇಂಡ್ಯೂಸ್ಡ್ ಟೋಕ್ಸಿಸಿಟಿ ಇನ್ ಲಿವರ್, ಕಿಡ್ನಿ ಏಂಡ್ ಟೆಸ್ಟಿಸ್ ಓಫ್ ವಿಸ್ಟಾರ್ ರೇಟ್ಸ್’ ಎಂಬ ಮಹಾಪ್ರಬಂಧಕ್ಕೆ ಚೆನ್ನೈನ ಸವಿತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿ ನೀಡಿದೆ.
ಅಡೂರು ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲು, ಎಡನೀರು ಸ್ವಾಮೀಜಿಸ್ ಹಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸಿದ ಇವರು ಅಡೂರು ಸ್ವಪ್ನ ಕ್ಲೋತ್ ಸ್ಟೋರ್ ಮಾಲಕ ಶ್ರೀ ಎ ಪಿ ನಾರಾಯಣ ಮತ್ತು ಶ್ರೀಮತಿ ಸುಶೀಲ ದಂಪತಿಗಳ ಪುತ್ರ ಹಾಗೂ ಚೆನ್ನೈನ ಸೆಂಟ್ರಲ್ ಇನ್ಸ್ಟಿಟ್ಯೂಟ್ ರಿಸರ್ಚ್ ಇನ್ ಸಿದ್ಧದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ. ಸುನಿಲ್ ಕುಮಾರ್ ರವರ ಸಹೋದರ. ಪ್ರಸ್ತುತ ವಯನಾಡ್ ಇನ್ಸ್ಟಿಟ್ಯೂಟ್ ಓಫ್ ಮೆಡಿಕಲ್ ಸಯನ್ಸ್ ನಲ್ಲಿ ಅನಾಟಮಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.