ಕೋಲಾರ(ವಿಶ್ವಕನ್ನಡಿಗ ನ್ಯೂಸ್) : ಬಡರೈತರು , ಮಹಿಳೆಯರ ಮನೆಬಾಗಿಲಿಗೆ ಬ್ಯಾಂಕ್ ಸೌಲಭ್ಯ ತಲುಪಿಸುವಲ್ಲಿ ಡಿಸಿಸಿ ಬ್ಯಾಂಕ್ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು , ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರವಾಗಿದೆ , ಜಾತಿ , ಪಕ್ಷ ನೋಡದೇ ಸಾಲ ವಿತರಿಸಿ , ರೈತರು , ಮಹಿಳೆಯರ ಪಾಲಿನ ಕಾಮಧೇನುವಾಗಿದೆ ಎಂದು ಶಾಸಕಿ ರೂಪಕಲಾ ತಿಳಿಸಿದರು.
ಕೆಜಿಎಫ್ ನಗರದ ವಿಷ್ಣು ಕಲ್ಯಾಣ ಮಂಟಪದಲ್ಲಿ ಕಮ್ಮಸಂದ್ರ ಪಾರಂಡಹಳ್ಳಿ , ಮಾರಿಕುಪ್ಪಂ , ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು , ಮಹಿಳೆಯರಿಗೆ ಬ್ಯಾಂಕ್ ಸಾಲಸೌಲಭ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬ್ಯಾಂಕ್ ರೈತರು , ಬಡವರು , ತಾಯಂದಿರ ಪರವಾಗಿ ಮಾಡಿರುವ ಕೆಲಸ , ಮನೆಬಾಗಿಲಿಗೆ ಸಾಲ ಸೌಲಭ್ಯ ಒದಗಿಸಿರುವ ನಿಟ್ಟಿನಲ್ಲಿ ನಬಾರ್ಡ್ ಗುರುತಿಸಿ ಗೌರವ ನೀಡಿದೆ ಎಂದರು.
ಸಮಾಜದ ಕಟ್ಟಕಡೆಯ ಕುಟುಂಬಕ್ಕೂ ಬ್ಯಾಂಕ್ ಸೌಲಭ್ಯವನ್ನು ತಲುಪಿಸುವ ಬದ್ಧತೆಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು.ಆಡಳಿತ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ . ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದು ಕಿವಿಮಾತು ಹೇಳಿದರು. ಪ್ಯಾಕ್ಸ್ಗಳ ಗಣಕೀಕರಣದ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ನೀಡುವ ಸಾಲದ ಪ್ರತಿ ಪೈಸೆಯೂ ರೈತರು.ಮಹಿಳೆಯರ ಬ್ಯಾಂಕ್ ಖಾತೆಗೆ ಹೋಗುವಂತೆ ಮಾಡಲಾಗಿದೆ , ಮರುಪಾವತಿಸುವ ಹಣದ ಮಾಹಿತಿಯೂ ಮಹಿಳೆಯರು , ರೈತರ ಮೊಬೈಲ್ಗೆ ತಲುಪುವಂತೆ ಮಾಡಿ , ಪಾರದರ್ಶಕತೆ ಕಾಪಾಡುವ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ ಎ ೦ ದು ಹರ್ಷ ವ್ಯಕ್ತಪಡಿಸಿದರು.
ರೈತರು ಇತ್ತೀಚಿನ ಅತಿವೃಷ್ಟಿಯಿಂದ ಕಂಗೆಟ್ಟಿದ್ದಾರೆ , ಕೆರೆಗಳು ತುಂಬಿವೆ , ಜತೆಗೆ ಕೋವಿಡ್ ೩ ನೇ ಅಲೆಯ ಭೀತಿಯೂ ಎದುರಾಗಿದೆ , ಇಂತಹ ಸಂದರ್ಭದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರ ಕೈಹಿಡಿಯುವ ಕೆಲಸ ಮಾಡಲು ಬ್ಯಾಂಕ್ ಮುಂದಾಗಿದೆ ಎಂದರು.
ಕೆಜಿಎಫ್ ತಾಲ್ಲೂಕಿನ ರೈತರು , ಮಹಿಳೆಯರಿಗೆ ಅತಿ ಹೆಚ್ಚು ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಸಿದ್ದವಿದ್ದು , ಅಗತ್ಯ ದಾಖಲೆಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಸಂಗ್ರಹಿಸಬೇಕು , ರೈತರಿಗೆ ಸಾಲ ಸೌಲಭ್ಯದ ಅರಿವು ನೀಡಬೇಕು , ಮಹಿಳೆಯರಿಗೆ ಸಂಘ ರಚಿಸಿಕೊಂಡು ಬಡ್ಡಿರಹಿತ ಸಾಲ ಪಡೆದು ಮೀಟರ್ ಬಡ್ಡಿದಂಧೆಯಿಂದ ಮುಕ್ತವಾಗುವ ದಾರಿ ತೋರಬೇಕು ಎಂದರು .
ಜ .೨೦ ರೊಳಗೆ ಸಾಲ ಸೌಲಭ್ಯ
ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ , ರೈತರು , ಮಹಿಳೆಯರು ಅಗತ್ಯ ದಾಖಲೆ ಒದಗಿಸಿದರೆ ಜ .೨೦ ರೊಳಗೆ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಸಿದ್ಧವಿದೆ ಎಂದು ತಿಳಿಸಿದರು.
ಸೊಸೈಟಿಗಳ ಆಡಳಿತ ಮಂಡಳಿ , ಗ್ರಾ.ಪಂ ಅಧ್ಯಕ್ಷರು ಬದ್ಧತೆಯಿಂದ ಬಡವರಿಗೆ ಸಾಲ ಸಿಗುವಂತೆ ಮಾಡಲು ಜಾಗೃತಿ ಮೂಡಿಸಿ , ೫ ಗುಂಟೆ , ೧೦ ಗುಂಟೆ ಜಮೀನು ಇರುವ ಬಡ ರೈತರಿಗೂ ಸಾಲ ಸಿಗುವಂತಾದರೆ ಮಾತ್ರ ಸಾರ್ಥಕತೆ ಎಂದು ತಿಳಿಸಿದರು . ಕೋವಿಡ್ ೩ ನೇ ಅಲೆಯ ಆರಂಭವಾಗಿದೆ . ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ನಿಲ್ಲಲು ಬ್ಯಾಂಕ್ ಸಂಕಲ್ಪ ಮಾಡಿದೆ . ನಾವು ಜನರ ಸೇವಕರಿದಂತೆ ನೀವು ಅಗತ್ಯ ದಾಖಲೆ ನೀಡಿದರೆ ಸಾಲ ನೀಡುವುದಿಲ್ಲ ಎನ್ನಲಾಗದು ಎಂಬಷ್ಟರ ಮಟ್ಟಿಗೆ ಸಾಲ ಒದಗಿಸಲು ಬದ್ಧತೆ ಹೊಂದಿದ್ದೇವೆ ಎ ೦ ದರು.
ಹುಡುಗಾಟಕ್ಕೆ ಈ ಸಭೆ ಮಾಡುತ್ತಿಲ್ಲ , ತಂದೆ , ತಾಯಿಯ ಹೆಸರಲ್ಲಿ ಜಮೀನಿದ್ದರೆ ಪವತಿವಾರಸು ಖಾತೆ ಮಾಡಿಸಿಕೊಳ್ಳಿ , ಗಾಮ ಪಂಚಾಯಿತಿಗೊಬ್ಬರು ಮುಖಂಡರು ಜವಾಬ್ದಾರಿ ವಹಿಸಿಕೊಳ್ಳಿ , ಸಾಲ ಸೌಲಭ್ಯ ಪ್ರತಿಯೊಂದು ಕುಟುಂಬಕ್ಕೂ ತಲುಪಿಸಿದಾಗ ಮಾತ್ರವೇ ಸಹಕಾರಿ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂದರು .
ಸಾಲ ಪಡದವರಲ್ಲೂ ಮರುಪಾವತಿಯ ಬದ್ಧತೆ ಬೇಕು ಎಂದ ಅವರು , ಕೋಳಿ ಫಾರಂಗೆ ಸಾಲ ಕೇಳಿದ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿ ಇದಕ್ಕೆ ಕನಿಷ್ಟ ೫ ಎಕರೆ ಜಮೀನಿರಬೇಕು , ಸೂಕ್ತದಾಖಲೆ ನೀಡಿದರೆ ಸಾಲ ಸಿಗಲಿದೆ ಎಂದು ತಿಳಿಸಿದರು . ಸಭೆಯಲ್ಲಿ ಕಮ್ಮಸಂದ್ರ , ಪಾರಂಡಹಳ್ಳಿ , ಮಾರಿಕುಪ್ಪಂ , ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು , ಮಹಿಳೆಯರು ಹಾಜರಿದ್ದರು .
ಈ ಸಂದರ್ಭದಲ್ಲಿ ಕೆಜಿಎಫ್ ತಾಲ್ಲೂಕು ಮುಖಂಡರಾದ ವೆಂಕಟಕೃಷ್ಣಾರೆಡ್ಡಿ , ಜಿಪಂ ಮಾಜಿ ಉಪಾಧ್ಯಕ್ಷ ಅಪ್ಪಿವೆಂಕಟರಾಮರೆಡ್ಡಿ , ಬಾಲಣ್ಣ , ವಿಜಯರಾಘವರೆಡ್ಡಿ , ಆನಂದಕೃಷ್ಣ ಸೇರಿದಂತೆ ಅನೇಕ ಮುಖಂಡರು , ಗಾ , ಪಂ ಅಧ್ಯಕ್ಷರು , ಸದಸ್ಯರು ಹಾಜರಿದ್ದರು .ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.