ಕೋಲಾರ (ವಿಶ್ವಕನ್ನಡಿಗ ನ್ಯೂಸ್) : ಶಿಕ್ಷಣ ಕ್ಷೇತ್ರದ ಭದ್ರ ಬುನಾದಿಯಾದ ಉಪನ್ಯಾಸಕರನ್ನು ಈ ರೀತಿಯಾಗಿ ಬೀದಿಯಲ್ಲಿ ಕೂಡಿಸಿ ಅಸಭ್ಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಹಾಗಾಗಿ ದೇಶಕ್ಕೆ ಉಪಸ್ಥಿತರಿರುವಂತೆ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಬೇಕು ಎಂದು ಸಿಎಂಆರ್ ಶ್ರೀನಿವಾಸ್ ಶ್ರೀನಾಥ್ ತಿಳಿಸಿದರು. ಅವರು ನಗರದ ಅತಿಥಿ ಉಪನ್ಯಾಸಕರು ಧರಣಿ ಮಾಡುತ್ತಿರುವ ವೇದಿಕೆಯನ್ನು ಉದ್ದೇಶಿಸಿ ಮಾತಾನಾಡುತ್ತಿದ್ದರು.
ಭಾರತಕ್ಕೆ ಒಂದೇ ಸಂವಿಧಾನ , ಸರ್ಕಾರ ನಡೆದು ಕೊಳ್ಳವ ರೀತಿ ನೀತಿಗಳು ಬೇರೆ ಬೇರೆ. ಅತಿಥಿ ಉಪನ್ಯಾಸಕರ ಮೇಲೆ ಅವರ ವ್ಯಕ್ತಿತ್ವವನ್ನು ಅವರ ವಿದತ್ತನ್ನು ನಾಶ ಮಾಡುವತ್ತಾ ಕರ್ನಾಟಕ ಸರ್ಕಾರ ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದೆ.
ಮನುಷ್ಯತ್ವವಿರುವ ಮಾನವೀಯತೆ ನೆಲೆಗಿಳಿಸದ ಕಟುಕ ಸರ್ಕಾರ ಕರ್ನಾಟಕ ರಾಜ್ಯವನ್ನು ಕತ್ತಲೆಗೆ ಕೊಂಡೊಯ್ಯುತ್ತಿದೆ ಈ ಹಿನ್ನಲೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ತಾತ್ವಿಕ ಚಿಂತನೆ ಬೌದ್ಧಿಕ ಆಲೋಚನೆಗಳನ್ನು ಬಿತ್ತುತ್ತಿರುವ ಅತಿಥಿ ಉಪನ್ಯಾಸಕರನ್ನು ಮಾನಸಿಕ ಮತ್ತು ದೈಹಿಕವಾಗಿ ಆರ್ಥಿಕತೆಯ ಅಸ್ಥಿರತೆಗೆ ನೂಕಿರುವ ಕರ್ನಾಟಕ ಸರ್ಕಾರಕ್ಕೆ ದಿಕ್ಕಾರವಿರಲಿ ಎಂದರು.
8 ಲಕ್ಷ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸರಿಯಾಗಿ ಇಪ್ಪತ್ತಾರು ದಿನಗಳಿಂದ ಬೀದಿಯಲ್ಲಿ ಓಡಾಡುವ ಸ್ಥಿತಿಗೆ ಬಂದಿದ್ದಾರೆ. ಇಂತಹ ದೇಶಕ್ಕೆ ಮಾದರಿಯಾದ ಶಿಕ್ಷಕರನ್ನು ಸರ್ಕಾರಿ ಉದ್ಯೋಗಸ್ಥರನ್ನಾಗಿ ಪರಿಗಣಿಸಿ ಈ ಗೊಂದಲವನ್ನು ಆದಷ್ಟು ಬೇಗ ಪರಿಹರಿಸಬೇಕು.
ತುರ್ತಾಗಿ ವಿಷಯದ ಬಗ್ಗೆ ಪರಿಶೀಲಿಸಿ ಇಡೀ ರಾಜ್ಯದ ಉಪನ್ಯಾಸಕರನ್ನು ಸೇವ ವಿಲೀನತೆಯೊಂದಿಗೆ ಖಾಯಂಗೊಳಿಸಬೇಕು ಎಂದರು ಉಪನ್ಯಾಸಕರು ಬೀದಿಯಲ್ಲಿ ಬಂದು ಇಪ್ಪತ್ತಾರು ದಿನಗಳಿಂದ ಧರಣಿ ಕುಳಿತಿರುವುದು ಶಿಕ್ಷಣ ಕ್ಷೇತ್ರಕ್ಕೆ ನಾಚಿಕೆಗೇಡಿನ ಸಂಗತಿ.
ಕೊಡುವ ಹನ್ನೊಂದು ಸಾವಿರಕ್ಕೆ ಜೀವನ ನಿರ್ವಹಣೆ ಬಲು ಕಷ್ಟ . ಹಾಗಾಗಿ ಬೇರೆ ಇಲಾಖೆಗಳಲ್ಲಿ ಸೇವಾ ವಿಲೀನತೆ ಮಾಡಿ ಅವರ ಸ್ವಾವಲಂಬಿ ಜೀವನಕ್ಕೆ ಸರ್ಕಾರ ಮುಂದಾಗಬೇಕೆಂದರು.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಮಾತಾನಾಡಿ ಅತಿಥಿ ಉಪನ್ಯಾಸಕರು ದೃತಿಗೆಡದೆ ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ.
ಹೋರಾಟಕ್ಕೆ ಆತಂಕ ಬೇಡ , ಎಲ್ಲರಲ್ಲಿ ಆತ್ಮಸ್ಥೆರ್ಯವಿರಲಿ , ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಈ ವಿಷಯವನ್ನು ಚರ್ಚಿಸಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಲು ಒತ್ತಾಯಿಸುತ್ತೇನೆ.
ಕಳೆದ ಇಪ್ಪತ್ತಾರು ದಿನಗಳಿಂದ ನಡೆಸುತ್ತಿರುವ ಧರಣಿಗೆ ಸರ್ಕಾರ ಧನಾತ್ಮಕವಾದ ಪ್ರತಿಕ್ರಿಯೆ ನೀಡಿ ಉತ್ತಮವಾದ ಸಂದೇಶವನ್ನು ನೀಡಬಹುದು.
ಸರ್ಕಾರ ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮತ್ತು ಖಾಯಂ ಮಾಡಿಕೊಳ್ಳದಿದ್ದರೆ ನಿಮ್ಮ ಹೋರಾಟದಲ್ಲಿ ನಾನು ಪಾಲ್ಗೊಳ್ಳುತ್ತೇನೆಂದು ತಿಳಿಸಿದರು.
ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಮಂಜುನಾಥ ಮಾತಾನಾಡಿ ನಿಮ್ಮ ಎಲ್ಲಾ ಹಕ್ಕುಗಳಿಗಾಗಿ ಸದಾ ನಿಮ್ಮೊಂದಿಗಿದ್ದೇವೆ. ನಿಮ್ಮ ಹೋರಾಟಕ್ಕೆ ಬೆಂಬಲವಿದೆ . ನಿಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಆದಷ್ಟು ಬೇಗ ಈಡೇರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ , ಡಾ.ಲಕ್ಷ್ಮೀದೇವಿ , ಕಾವೇರಪ್ಪ ,ಡಾ ಶರಣಪ್ಪ ಗಟ್ಟೂರು , ಕಾರ್ಯದರ್ಶಿ ಹಾಗೂ ಪ್ರತಿಕಾ ಸಲಹೆಗಾರ ಡಾ . ವಿ ಬಿ ಶಿವಣ್ಣ ಮತ್ತು ಕೆ ಮತ್ತು ಕೋಲಾರ ಬಾಲಾಜಿ , ಪ್ರಕಾಶ್ , ಸಂದೀಪ್ , ವೆಂಕಟೇಶ್ ಬಾಬು , ಚೇತನ , ಪೂರ್ಣಿಮಾ , ಪುಷ್ಪ ಮಂಜುನಾಥ , ನೂರಕ್ಕೂ ಹೆಚ್ಚು ಲಾರ ಜಿಲ್ಲಾ ಅತಿಥಿ ಉಪನ್ಯಾಸಕರಾದ ಉಪನ್ಯಾಸಕರು ಭಾಗವಹಿಸಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.