ಮಂಗಳೂರು (www.vknews.com) : ಬ್ಲೂಮೂನ್ ಬಾಟಲಿಂಗ್ ಕಂಪನಿಯ ಆಕ್ಸಿಬ್ಲೂ ಮಿನರಲ್ ವಾಟರ್ ಹಾಗೂ ಜೂಸು ಸಾಫ್ಟ್ಡ್ರಿಂಕ್ಸ್ ಇದರ ಮಂಗಳೂರು ನಗರದ ವಿತರಕ ಸಂಸ್ಥೆ ಎ ಒನ್ ಡಿಸ್ಟ್ರಿಬ್ಯೂಟರ್ಸ್ನ ಉದ್ಘಾಟನೆಯು ನಗರದ ಪಾಂಡೇಶ್ವರ ಸಮೀಪ ಶನಿವಾರ ನಡೆಯಿತು.
ಆಝಾದ್ ಗ್ರೂಪ್ ನಿರ್ದೇಶಕರಾದ ರಹ್ಮತುಲ್ಲಾಹ್ ಆಝಾದ್ ಉದ್ಘಾಟನೆಯನ್ನು ನೆರವೇರಿಸಿದರು. ಆಕ್ಸಿಬ್ಲೂ ಪ್ರಧಾನ ವ್ಯವಸ್ಥಾಪಕ ಡಿ.ಐ. ಅಬೂಬಕರ್ ಕೈರಂಗಳ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಎಸ್. ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಆಕ್ಸಿಬ್ಲೂ ವಿತರಕರಾದ ಬಿ.ಎಲ್. ಅಹ್ಮದ್, ಇಮ್ತಿಯಾಝ್ ಅಹ್ಮದ್, ಡಿಐ ಕಂಪನಿಯ ಸಾಲಿಹ್ ಮೊಂಟುಗೋಳಿ ಹಾಗೂ ಶಾಝ್ ಉಳ್ಳಾಲ, ಮರ್ಝೂಕ್ ಉಪಸ್ಥಿತರಿದ್ದರು.
ಎ ಒನ್ ಡಿಸ್ಟ್ರಿಬ್ಯೂಟರ್ಸ್ನ ಪಾಲುದಾರರಾದ ಅಶ್ರಫ್ ಸ್ವಾಗತಿಸಿ ಫಾಝಿಲ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.