(ವಿಶ್ವ ಕನ್ನಡಿಗ ನ್ಯೂಸ್) : ಹಲವು ತಜ್ಞರು ನೀಡಿರುವ ಅಭಿಪ್ರಾಯದಂತೆ, ಸಾಮಾನ್ಯವಾಗಿ ಬಟ್ಟೆಯ ಮಾಸ್ಕ್ಗಳು ಕೊರೊನಾ ಸೋಂಕನ್ನು ತಡೆಯುವಲ್ಲಿ ಯಶಸ್ವಿಯಾಗುವುದಿಲ್ಲ,
ಬಟ್ಟೆಯ ಮಾಸ್ಕ್ ಧರಿಸುವುದಾದರೆ ಎರಡು ಅಥವಾ ಮೂರು ಪದರಗಳಿರುವ ಮಾಸ್ಕ್ಗಳನ್ನೇ ಧರಿಸಿ, ಒಂದೇ ಪದರವನ್ನು ಹೊಂದಿರುವ ಮಾಸ್ಕ್ಗಳು ಏರೋಸೋಲ್ಸ್ಗಳನ್ನು ತಡೆಯುವಲ್ಲಿ ವಿಫಲವಾಗುತ್ತದೆ, ಇದರಿಂದ ಸುಲಭವಾಗಿ ಕೊರೊನಾ ಸೋಂಕಿನ ಕಣಗಳು ದೇಹದ ಒಳಗೆ ಹೋಗಲು ಕಾರಣವಾಗುತ್ತದೆ.
ಒಂದೊಮ್ಮೆ ನೀವು ಬಟ್ಟೆಯ ಮಾಸ್ಕ್ ಧರಿಸುತ್ತಿದ್ದರೆ ಅದರೊಳಗೆ ಒಂದು ಯೂಸ್ ಆಂಡ್ ಥ್ರೋ ಮಾಸ್ಕ್ ಧರಿಸಿ, ಎರಡನೇ ಮಾಸ್ಕ್ ಸಂಪೂರ್ಣವಾಗಿ ನಿಮ್ಮ ಮೂಗು ಹಾಗೂ ಗಲ್ಲವನ್ನೂ ಮುಚ್ಚುವಂತಿರಲಿ. ಹಾಗೆಯೇ ಬಟ್ಟೆಯ ಮಾಸ್ಕ್ ಧರಿಸಿದರೂ ಶುಚಿಯಾಗಿಟ್ಟುಕೊಳ್ಳಿ, ಒಮ್ಮೆ ಬಳಸಿದ ಬಳಿಕ ತೊಳೆಯಿರಿ, ಹಾಗೆಯೇ ಯೂಸ್ ಆಂಡ್ ಥ್ರೋ ಮಾಸ್ಕ್ನ್ನು ಒಮ್ಮೆ ಬಳಸಿದ ಬಳಿಕ ಬಿಸಾಡಿರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.