ಆಡಂಬರದ ಮದುವೆ ಇಸ್ಲಾಂ ಸಂಸ್ಕೃತಿಯ ಭಾಗವಲ್ಲ
ಬಂಟ್ವಾಳ(www.vknews.in): ಆಡಂಬರದ ಮದುವೆ ಇಸ್ಲಾಂ ಸಂಸ್ಕೃತಿ ಅಲ್ಲ ಸರಳ ವಿವಾಹವಾಗಿದೆ ಇಸ್ಲಾಂ ಸಂಸ್ಕ್ರತಿ . ಮದುವೆಯ ಹೆಸರಿನಲ್ಲಿ ನಡೆಯುವ ಕೆಲ ಒಂದು ಆಚರಣೆಗಳ ವಿರುದ್ಧ ಮೊಹಲ್ಲ ಆಡಳಿತ ಸಮಿತಿಯ ಮೌನ ಖಂಡನರ್ಹಾವಾಗಿದೆ ಎಂದು ಇತ್ತೀಚೆಗೆ ವಿವಾಹದಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾ ಸಿರಾಜುಲ್ ಹುದಾ ಜುಮ್ಮಾ ಮಸೀದಿ ಖತೀಬರಾದ ಕೆ.ವಿ.ಮಜೀದ್ ದಾರಿಮಿ ಹೇಳಿದರು. ನಮ್ಮ ಸಮಾಜ ವ್ಯವಸ್ಥಿತ ರೀತಿಯಲ್ಲಿ ಸಾಗಬೇಕಾದರೆ ಸಮುದಾಯ ಮತ್ತು ಸಮಾಜದಲ್ಲಿರುವ ಕೆಲವೊಂದು ನೂನ್ಯತೆಗಳಿಗೆ ತಕ್ಕ ಪರಿಹಾರ ಕಾಣಲೇ ಬೇಕು ಆಗ ಮಾತ್ರ ನೆಮ್ಮದಿಯ ಉಸಿರನ್ನು ಬಿಟ್ಟು ಸಂತಸದ ಜೀವನವನ್ನು ಸಾದಿಸಲು ಸಾಧ್ಯ ಇದಕ್ಕೆ ಪರಸ್ಪರ ತಿಳುವಳಿಕೆ ವಿಜ್ಞಾನ ಸಹಾಯ ಸಹಕಾರ ಸಹಾನುಭೂತಿ ಮುಂತಾದ ಮಾನವೀಯ ಗುಣಗಳು ಬೇಕು ಎಂದರು.
ಇಂದು ಪ್ರತ್ಯೇಕವಾಗಿ ಮುಸ್ಲಿಂ ಸಮುದಾಯದಲ್ಲಿ ಎದ್ದು ಕಾಣುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಆಡಂಬರದ ಮದುವೆ ಮುಸ್ಲಿಮೇತರ ಸಮುದಾಯದಲ್ಲಿ ಇದು ಇಷ್ಟೊಂದು ಅಪಾಯ ಕಾರಿಯಾಗಿ ಬೆಳೆದಿಲ್ಲ ಎಂದರು. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಮುಂದೆ ಸಮುದಾಯವು ಪಶ್ಚಾತಾಪ ಪಡಬೇಕಾಗಿ ಬರಬಹುದು ಎಂದು ಎಚ್ಚರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.