ಹಿಂದೂ ಸಹೋದರನ ಮೃತ ದೇಹವನ್ನು ಸಾಗಿಸುವಲ್ಲಿ ನೆರವಾದ ಮುಸ್ಲಿಂ ಸಹೋದರರು
ಬೆಳ್ತಂಗಡಿ(www.vknews.in) : ಹೇಡ್ಯಾ ಭಾಗದ ನಿನ್ನೆ ತಡ ರಾತ್ರಿ ಸುಮಾರು 11.30 ಗಂಟೆಗೆ ಹಿಂದೂ ಸಹೋದರನು ಹೋಟೆಲ್ ಕೆಲಸ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಬಿದ್ದಿರುವ ವಿದ್ಯುತ್ ತಂತಿ ಕುತ್ತಿಗೆ ಸಿಲುಕಿ ಸ್ಕೂಟರ್ ಮೂಲಕ ಬರುವಾಗ ಆಂಕ್ಸಿಡೆಂಟ್ ಸಂಭವಿಸಿ ದಾರುಣ ಸಾವು ನಿನ್ನೆ ರಾತ್ರಿ ಸಂಭವಿಸಿದೆ.
ಸ್ಥಳಕ್ಕೆ ಧಾವಿಸಿದ ಅಲ್ ಉಮ್ಮಾ ತಂಡದ ಪಧಾಧಿಕಾರಿಗಾಳದ ಸೈಪ್ , ಪಾರೂಕ್ , ರಿಯಾಝ್ , ಬಶೀರ್ ರಶೀದ್ ರವರು ಆ ಸ್ಥಳಕ್ಕೆ ಬಂದು ಪೋಲಿಸ್ ಮೂಲಕ ಕರೆ ಮಾಡಿ ಮಾಹಿತಿ ನೀಡಿದರು. ಈ ಮೂಲಕ ಆ ವ್ಯಕ್ತಿಯನ್ನು ರಘು ಎಂದು ಗುರುತಿಸಿಲಾಯಿತು. ಉಜಿರೆ ಮಂಜುನಾಥ ಹೋಟೆಲ್ ಮಾಲಕರಾದ ಮತ್ತು ನಮ್ಮ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಶರವೇಗದ ಚಾಲಕ ಜಲೀಲ್ ಬಾಬಾ ಹಾಗೂ ಮುಸ್ತಾಕ್ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮಾನವೀಯತೆ ಮೆರೆದಿದ್ದಾರೆ. ಈ ಸಂಧರ್ಭದಲ್ಲಿ ಕಡಿರುದ್ಯಾವರ ಪಂಚಾಯತ್ ಅಧ್ಯಕ್ಷರು ಅಶೋಕ್ ಹಾಗೂ ಮೆಸ್ಕಾಂ ಅಧಿಕಾರಿಗಳಾದ ಜೈ ಹಾಗೂ ರಮೇಶ್ ರವರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.