ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವೇಳೆ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ನನ್ನು ಡಿ ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದು ನಿನ್ನೆ ಭಾರೀ ಸುದ್ದಿಯಾಗಿತ್ತು.
ಈ ಬಗ್ಗೆ ಫೇಸ್ ಬುಕ್ ಲೈವ್ ಮೂಲಕ ಪ್ರತಿಕ್ರಿಯೆ ನೀಡಿದ ಮೊಹಮ್ಮದ್ ನಲಪಾಡ್, ಪಾದಯಾತ್ರೆ ನಡಿಗೆ ವೇಳೆ ನನ್ನನ್ನು ನೋಡದೆ ಹಿಂದಿನಿಂದ ಕಾಲರ್ ಹಿಡಿದು ಪಕ್ಕಕ್ಕೆ ತಳ್ಳಿದ್ದಾರೆ. ಅವರು ನನ್ನನ್ನು ನೋಡದೆ ಮಾಡಿರೋದು, ಬೇಕೆಂದೇ ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ. ಡಿ ಕೆ ಸುರೇಶ್ ನನಗೆ ಅಣ್ಣ ಇದ್ದಂತೆ, ಅವರು ತಳ್ಳಿದ್ದು ನನಗೆ ಯಾವುದೇ ಬೇಜಾರ ಆಗಿಲ್ಲ, ರಾಜಕೀಯದಲ್ಲಿ ನಾನು ಇಂದು ಈ ಸ್ಥಿತಿಯಲ್ಲಿರಲು ನನ್ನ ತಂದೆಯ ನಂತರ ಡಿ ಕೆ ಬ್ರದರ್ಸ್ ಕಾರಣ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.