ಮಂಗಳೂರು (www.vknews.com) : “ರಕ್ತದಾನವು ಭೇದವಿಲ್ಲದೆ ಜೀವ ಉಳಿಸುವ ಸಂಜೀವಿನಿಯಾಗಿದೆ” ಎಂದು ಮಂಗಳೂರು ಲಯನ್ಸ್ ಕ್ಲಬ್ನ ಉಪರಾಜ್ಯಪಾಲರಾದ ಡಾ. ಮೆಲ್ವಿನ್ ಡಿಸೋಜಾ ಅಭಿಪ್ರಾಯಪಟ್ಟರು.
ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಇಲ್ಲಿನ ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಮಾತನಾಡಿ ರಕ್ತದಾನ ಎಂಬುದು ಒಂದು ಮಹತ್ತರವಾದ ಮತ್ತು ಇನ್ನೊಬ್ಬರ ಪ್ರಾಣವನ್ನು ಉಳಿಸುವ ಶ್ರೇಷ್ಠದಾನ ಎಂದರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯಾವಾಗ ನಮಗೆ ಲಭಿಸುವ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಂಡಾಗ ಮಾತ್ರ ಈ ಭೂಮಿಯಲ್ಲಿ ನಾವೊಂದು ಶ್ರೇಷ್ಠ ವ್ಯಕ್ತಿಯೆಂದು ಪರಿಗಣಿಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಾಧಿಕಾರಿ ಡಾ. ಜೆ.ಎನ್. ಭಟ್, ಬ್ಲಡ್ ಬ್ಯಾಂಕ್ ಜಿಲ್ಲಾ ಸಂಯೋಜನಾಧಿಕಾರಿ ಶ್ರೀ ಪ್ರವೀಣ್ ಕುಮಾರ್, 224ನೇ ರಕ್ತದಾನ ಶಿಬಿರದ ಸಂಯೋಜಕರಾದ ಎನ್.ಜೆ ನಾಗೇಶ್ಕುಮಾರ್, ಹರೀಶ್ ಮಲ್ಲಿ, ನಮಿತ ಡಿ ರಾವ್, ಅಶೋಕ್ ಪಿಂಟೋ, ಲ್ಯಾನ್ಸಿ ಕಾರ್ಲೋ, ಪ್ರಾಣೇಶ್ ಕುಮಾರ್, ವಸಂತರಾವ್, ಕಾಲೇಜಿನ ಯುವ ರೆಡ್ ಕ್ರಾಸ್ನ ಸಂಯೋಜಕರಾದ ಡಾ. ಮಹೇಶ್ ಕೆ ಬಿ, ಪ್ರೊ. ನಯನ ಕುಮಾರಿ ಹಾಗೂ ಪ್ರೊ. ರಘುಪತಿ ಉಪಸ್ಥಿತರಿದ್ದರು. 135 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ವಿದ್ಯಾರ್ಥಿಗಳಾದ ಸಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು, ವೈಷ್ಣವಿ ಸ್ವಾಗತಿಸಿ, ರಿತೇಶ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.