(ವಿಶ್ವ ಕನ್ನಡಿಗ ನ್ಯೂಸ್) : ವಾಘೋಲಿಯಿಂದ ಸುಮಾರು 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಪ್ರವಾಸಕ್ಕೆಂದು ಹೋಗಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿದೆ. ಚಾಲಕ ಹೃದಯಾಘಾತ ಸಂಭವಿಸುತ್ತಿದ್ದಂತೆ ಬಸ್ಸನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದಾನೆ.
ಚಾಲಕನಿಗೆ ತಕ್ಷಣ ಪ್ರಥಮ ಚಿಕಿತ್ಸೆಯ ನೆರವಿನ ಅಗತ್ಯವಿತ್ತು. ಆದರೆ ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇರಲಿಲ್ಲ. ಹಳ್ಳಿ ದಾರಿಯಾಗಿದ್ದ ಕಾರಣ ಆಸ್ಪತ್ರೆಗೆ ತೆರಳಲು ಮುಂದೆ ಸಾಗಲೇಬೇಕಿತ್ತು. ಏನು ಮಾಡಬೇಕೆಂದು ತೋಚದೇ ಬಸ್ಸಿನಲ್ಲಿದ್ದ ಮಹಿಳೆಯರು ಗಾಬರಿಯಾಗಿ ಅಳಲು ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಯೋಗಿತ ಎಂಬ ಮಹಿಳೆ ಕಾರು ಹಾಗೂ ಜೀಪು ಚಲಾವಣೆ ಮಾಡಿ ಇದ್ದ ಅಭ್ಯಾಸವನ್ನೇ ಬಳಸಿಕೊಂಡು, ಡ್ರೈವರ್ ಪ್ರಾಣ ನನ್ನ ಕಾಪಾಡಲು ಬರೋಬ್ಬರಿ ಹತ್ತು ಕಿಲೋಮೀಟರ್ ದೂರ ಬಸ್ ಚಲಾಯಿಸಿದ್ದಾರೆ.
#Pune woman drives the bus to take the driver to hospital after he suffered a seizure (fit) on their return journey. #Maharashtra pic.twitter.com/Ad4UgrEaQg— Ali shaikh (@alishaikh3310) January 14, 2022
#Pune woman drives the bus to take the driver to hospital after he suffered a seizure (fit) on their return journey. #Maharashtra pic.twitter.com/Ad4UgrEaQg
ಯೋಗಿತಾ ಧೈರ್ಯದಿಂದ ಬರೋಬ್ಬರಿ ಹತ್ತು ಕಿಲೋಮೀಟರ್ ಬಸ್ ಚಲಾಯಿಸಿಕೊಂಡು ಬಂದು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೆ ಈ ವೇಳೆ ಧೃತಿಗೆಡದಂತೆ ಬಸ್ಸಿನಲ್ಲಿದ್ದ ಎಲ್ಲ ಮಹಿಳೆಯರಿಗೂ ಧೈರ್ಯ ತುಂಬಿದ್ದಾರೆ. ಯೋಗಿತಾ ಬಸ್ ಚಲಾವಣೆ ಮಾಡಿದ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಆಕೆಯ ಸಮಯಪ್ರಜ್ಞೆ ಹಾಗೂ ದೈರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.