ಮಂಗಳಪದವು (www.vknews.com) : ಬುಸ್ತನುಲ್ ಉಲೂಂ ಮದರಸದಲ್ಲಿ ಸ್ವಚ್ಛ ಕುಟುಂಬ, ಸ್ವಸ್ಥ ಸಮಾಜ ಎಂಬ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿ ಮಾತನಾಡಿದSMA ರಾಜ್ಯ ಉಪಾಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಮುಸ್ಲಿಂ ಸಮಾಜವನ್ನು ಅನಾಚಾರ ಹಾಗೂ ಮಾದಕದ್ರವ್ಯ ಎಂಬ ದುಷ್ಟ ಚಟಗಳಿಂದ ಸಮಾಜವನ್ನು ರಕ್ಷಿಸುವುದು ಜಮಾಹತ್ ಮೊಹಲ್ಲ ಸಮಿತಿಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಸಮಿತಿ ಕಾರ್ಯಾಚರಿಸುವ ಮೂಲಕ ಜಾಗೃತಿ ಮೂಡಿಸಿ ಮುಂದಿನ ಪೀಳಿಗೆಯನ್ನು ಉತ್ತಮ ಸಮಾಜದ ವ್ಯಕ್ತಿಗಳನ್ನಾಗಿ ಮೂಡಿಸಬೇಕು ಎಂದು ನುಡಿದರು.
ಅಬ್ದುಲ್ ಮಜೀದ್ ಸಖಾಫಿ ತರಗತಿ ಮಂಡಿಸಿದರು. SMA , Zonal ನಾಯಕರಾದ ಉಮ್ಮರ್ ಬಾಕಿಮಾರ್, Regional ಅಧ್ಯಕ್ಷರಾದ ಅಬ್ದುಲ್ ಹಕೀಮ್ ಜಮಾತ್ ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು. ಮದರಸ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿದರು. ಮದರಸ ಮುಖ್ಯೋಪಾಧ್ಯಾಯರಾದ ಅಬ್ದುಲ್ ರಜಾಕ್ ಮುಸ್ಲಿಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಖತೀಬರಾದ ಅಬ್ದುಸ್ಸಲಾಮ್ ಅಂಜದಿ ದುವಾ ನಡೆಸಿಕೊಟ್ಟರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.