(www.vknews.in) : ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದೇ ತಡ ಕ್ರಿಕೆಟ್ ವಲಯದಿಂದ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ಹೇಳಿದಾಗ ಬಿಸಿಸಿಐ ಇವರ ಬಳಿ ವಿಶೇಷ ಮನವಿಯೊಂದನ್ನು ಮಾಡಿತ್ತು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಮಾಧ್ಯಮದ ವರದಿ ಪ್ರಕಾರ, ವಿರಾಟ್ ಕೊಹ್ಲಿ ಅಧಿಕೃತವಾಗಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಜವಾಬ್ದಾರಿಯಿಂದ ಕೆಳಗಿಳಿಯುವ ಮುನ್ನ ನಾಯಕನಾಗಿ ವಿದಾಯದ ಟೆಸ್ಟ್ ಪಂದ್ಯ ಆಡುವಂತೆ ಬಿಸಿಸಿಐ ಕೋರಿತ್ತು. ಆದರೆ, ಇದಕ್ಕೆ ಕೊಹ್ಲಿ “ಒಂದು ಪಂದ್ಯ ದೊಡ್ಡ ಬದಲಾವಣೆ ಮಾಡುವುದಿಲ್ಲ, ನಾನಿರುವುದೇ ಹೀಗೆ” ಎಂದು ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.