ಜನವರಿ -21, ಶುಕ್ರವಾರ ಮಸೀದಿಗಳಲ್ಲಿ ಕಾಲೇಜಿನ ಸಹಾಯಾರ್ಥ ಸಹಾಯಧನ ಸಂಗ್ರಹ : ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಫೈಝೀಸ್ ಕರೆ
(www.vknews.in) : ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಶಿಕ್ಷಣ ಕೇಂದ್ರವಾದ ಪಟ್ಟಿಕ್ಕಾಡ್ ಜಾಮಿಆಃ ನೂರಿಯಾ ಅರಬಿಕ್ ಕಾಲೇಜಿನ 59ನೇ ಘಟಿಕೋತ್ಸವ 57ನೇ ಪದವಿ ಪ್ರದಾನ ಸಮಾರಂಭವು ಜನವರಿ 28,29,30 ದಿನಾಂಕ ಗಳಲ್ಲಿ ಕಾಲೇಜಿನ ಪಿ.ಎಂ.ಎಸ್.ಎ.ಪೂಕೋಯ ತಂಙಳ್ ನಗರದಲ್ಲಿ ನಡೆಯಲಿದೆ.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧೀನದಲ್ಲಿ ಕೇರಳ-ಕರ್ನಾಟಕದ ಮೊತ್ತ ಮೊದಲ ಪದವಿ ಪ್ರದಾನ ಸಂಸ್ಥೆಯಾಗಿ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಸಂಸ್ಥೆಯಲ್ಲಿಂದು ಸಾವಿರಕ್ಕಿಂತಲೂ ಮೇಲ್ಪಟ್ಟು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು ಏಳು ಸಾವಿರಕ್ಕಿಂತಲೂ ಅಧಿಕ ಮಂದಿ ಈತನಕ ಪಾರಂಗತರಾಗಿ ವಿವಿದೆಡೆಗಳಲ್ಲಿ ಧಾರ್ಮಿಕ ಸೇವೆಯನ್ನು ನಿರ್ವಹಿಸಿದ್ದಾರೆ. 60 ರಷ್ಟು ಜೂನಿಯರ್ ಕಾಲೇಜುಗಳೂ ದರ್ಸ್ ಗಳೂ ಉನ್ನತ ವಿದ್ಯಾಭ್ಯಾಸ ಕ್ಕಾಗಿ ಜಾಮಿಆಃವನ್ನೇ ನೇರವಾಗಿ ಆಶ್ರಯಿಸಿರುವುದರಿಂದ ಈ ವಿದ್ಯಾರ್ಥಿ ಸಂಖ್ಯಾಬಲವು ಇನ್ನೂ ದ್ವಿಗುಣ ಗೊಳ್ಳಲಿದೆ. ದಿನವೊಂದಕ್ಕೆ ರೂಪಾಯಿ ಲಕ್ಷಕ್ಕಿಂತ ಮೇಲ್ಪಟ್ಟು ಬೇಕಾಗುತ್ತಿದ್ದು,ಪ್ರಸ್ತುತ ಇರುವ ವರಮಾನಗಳಾವುದೂ ಸಾಕಾಗುತ್ತಿಲ್ಲ.ಇದಕ್ಕಾಗಿಯೇ ತವಾಸುಲ್ ಪದ್ಧತಿಯನ್ನು ಆಯೋಜಿಸಿ ಈಗಾಗಲೇ ಫೈಝೀಸ್ ಜಿಲ್ಲಾ ಸಮಿತಿ ಮುಖಾಂತರ ರೇಂಜ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ ವಿಶೇಷ ಸಹಾಯಧನ ಸಂಗ್ರಹ ಕಾರ್ಯ ಯೋಜನೆಯನ್ನು ಹಾಕಿಕೊಂಡಿದೆ.
ಅಲ್ಲದೆ ಜನವರಿ 21 ನೇ ಶುಕ್ರವಾರ ಜುಮಾ ದಿನ ಮಸೀದಿಗಳಲ್ಲಿಯೂ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಸಹಾಯಧನ ಸಂಗ್ರಹಕ್ಕೆ ಜಾಮಿಆಃ ದ ಸಾರಥಿಗಳಾದ ಬಹು ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಸಯ್ಯಿದ್ ಸಾದಿಖಲಿ ಶಿಹಾಬ್ ತಂಙಳ್,ಶೈಖುಲ್ ಜಾಮಿಆಃ ಶೈಖುನಾ ಆಲಿಕುಟ್ಟಿ ಉಸ್ತಾದ್ ಮನವಿ ಮಾಡಿದ್ದು, ಪ್ರಸ್ತುತ ಫಂಡ್ ಸಂಗ್ರಹವನ್ನು ಹಾಗೂ ಸಮ್ಮೇಳನಗಳನ್ನು ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಫೈಝೀಸ್ ಅಧ್ಯಕ್ಷರಾದ ಬಹು ಉಸ್ಮಾನುಲ್ ಫೈಝಿ,ಪ್ರಧಾನ ಕಾರ್ಯದರ್ಶಿ ಬಹು ಅಶ್ರಫ್ ಫೈಝಿ ಕೊಡಗು ಕೋಶಾಧಿಕಾರಿ ಬಹು ಕನ್ಯಾನ ಸುಲೈಮಾನ್ ಫೈಝಿ ಜಂಟಿಯಾಗಿ ಕರೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.