ಶೀಘ್ರದಲ್ಲೇ ಮಾಡನ್ನೂರು ಮಖಾಂ ಶರೀಫ್ ವಠಾರದಲ್ಲಿ ಲೋಕಾರ್ಪಣೆಗೊಂಡು ಸೇವೆಗೆ ಸಜ್ಜು
(ವಿಶ್ವ ಕನ್ನಡಿಗ ನ್ಯೂಸ್) : ಮಾಡನ್ನೂರು ಮೊಹಲ್ಲಾದ ಪ್ರಗತಿಯಲ್ಲಿ ತೊಡಗಿಸಿಕೊಂಡು ಸಮಾಜಸೇವಾ ಚಟುವಟಿಕೆಗಳ ಮೂಲಕ ಮಾಡನ್ನೂರಿನಾದ್ಯಂತ ಮನೆಮಾತಾಗಿರುವ ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಆಶ್ರಯದಲ್ಲಿ ವ್ಯವಸ್ಥೆ ಗೊಳಿಸಲಿರುವ ಹೊಸ ಆಂಬುಲೆನ್ಸ್ ಮಾರುತಿ ಶೋರೂಂ ನಿಂದ ಸ್ವೀಕರಿಸಲಾಯಿತು.
ಅಧಿಕೃತ ಕಂಪೆನಿಯಿಂದಲೇ ಪೂರ್ಣವಾಗಿ ತಯಾರಿಸಲ್ಪಟ್ಟ ಉತ್ತಮ ಗುಣಮಟ್ಟದ ಆಂಬುಲೆನ್ಸನ್ನು ಶೋರೂಮ್ ನಿಂದಲೇ ನೇರವಾಗಿ ಸಮಿತಿಯು ಮುಂಗಡ ಕಾಯ್ದಿರಿಸಿದ್ದು, ಇದೀಗ ಎಂಟು ತಿಂಗಳ ಕಾಯುವಿಕೆಯ ಬಳಿಕ ಉದ್ದೇಶಿತ ಆಂಬುಲೆನ್ಸ್ ಕೈ ಸೇರಿದೆ.
ಉಪ್ಪಿನಂಗಡಿಯ ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಡೆಲಿವರಿ ನೀಡುತ್ತಿದ್ದು, ಕಲ್ಚರಲ್ ಸೆಂಟರ್ ಪರವಾಗಿ ಮಾಡನ್ನೂರಿನ ಜಮಾಅತ್ ಪ್ರಮುಖರೂ ನೂರುಲ್ ಹುದಾ ಅಕಾಡೆಮಿ ಅಧ್ಯಕ್ಷರೂ ಆದ ಬುಶ್ರಾ ಅಬ್ದುಲ್ ಅಝೀಝ್,ಮಾಡನ್ನೂರು ಮಸೀದಿ ಅಧ್ಯಕ್ಷರಾದ ಕೆ.ಕೆ.ಇಬ್ರಾಹೀಂ ಹಾಜಿ, ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ಬಿ.ಎಂ.ಅಬ್ದುಲ್ಲಾ ಚಾಲ್ಕೆರೆ, ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ಖತೀಬರಾದ ಸಿರಾಜುದ್ದೀನ್ ಫೈಝಿ ಮಾಡನ್ನೂರು ರವರು ಸುಝುಕಿ ಮೋಟಾರ್ಸ್ ನ ಅಧಿಕ್ರತ ವಿತರಣೆ ಸಂಸ್ಥೆಯಾದ ಮಾಂಡೋವಿ ಮೋಟಾರ್ಸ್ ನ ಉಪ್ಪಿನಂಗಡಿ ಬ್ರಾಂಚ್ ಸಹಾಯಕ ಜೆನರಲ್ ಮೇನೇಜರ್ ಚಂದ್ರಶೇಖರ್, ಸಹಾಯಕ ವ್ಯವಸ್ಥಾಪಕರಾದ ಸುಜೀತ್,ಟೀಂ ಲೀಡರ್ ಶ್ರೀ ಹರ್ಷಾ, ಕಾರ್ಯ ನಿರ್ವಹಣಾಧಿಕಾರಿ ಹರಿಕಿರಣ್ ರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಲ್ಚರಲ್ ಸಮಿತಿಯ ಕಾರ್ಯದರ್ಶಿ ಉಮರ್ ಕೌಡಿಚಾರ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ಶರೀಫ್ ಅಂಗಡಿ, ಹಮೀದ್ ಪೈಚಾರ್, ಝುಬೈರ್ ಕೊಳಂಬೆ, ರಫೀಕ್ ಟಿ.ಕೆ. ಮೊದಲಾದವರು ಉಪಸ್ಥಿತರಿದ್ದರು.
ಶೀಘ್ರದಲ್ಲೇ ಲೋಕಾರ್ಪಣಾ ಸಮಾರಂಭ
ಆಂಬುಲೆನ್ಸ್ ನ ಹೊರ ಅಲಂಕಾರ,ನಾಮಫಲಕ ಅಳವಡಿಕೆ ಮೊದಲಾದ ಕಿರು ಕೆಲಸ ಕಾರ್ಯಗಳು ನಡೆದು ಮಾಡನ್ನೂರು ಶುಹದಾ ಮಖಾಂ ಶರೀಫಿನಲ್ಲಿ ವಿಜ್ರಂಭಣೆಯ ಕಾರ್ಯಕ್ರಮದ ಮೂಲಕ ಶೀಘ್ರದಲ್ಲೇ ಲೋಕಾರ್ಪಣೆ ಗೊಳ್ಳಲಿದೆ.
ಜಮಾಅತಿನವರು ಹಾಗೂ ಹೊರಗಿನ ಹಲವು ಉದಾರ ದಾನಿಗಳು , ಅನಿವಾಸಿ ಸಹೋದರರು, ಸಾಮಾಜಿಕ ಸೇವಾ ಸಮಿತಿಗಳು ಇದಕ್ಕಾಗಿ ನೆರವು ನೀಡಿದ್ದು ಎಲ್ಲರನ್ನೂ ಆಂಬುಲೆನ್ಸ್ ಲೋಕಾರ್ಪಣಾ ಸಮಾರಂಭ ಕ್ಕೆ ಆಮಂತ್ರಿಸಿ ಕ್ರತಜ್ಞತೆ ಸಲ್ಲಿಸಲಾಗುವುದೆಂದು ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ನ ಪದಾಧಿಕಾರಿಗಳು ತಿಳಿಸಿದ್ದು, ಸಹಾಯಧನ ವಾಗ್ದಾನ ಬಾಕಿಯಿರುವವರು ಉದ್ಘಾಟನಾ ಸಮಾರಂಭ ಕ್ಕಿಂತ ಮುಂಚೆ ಪಾವತಿಸಿ ಸಹಕರಿಸಬೇಕೆಂದು ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.