ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ವಿದ್ಯಾಲಯಗಳಲ್ಲಿ ವಿದ್ಯೆಯನ್ನು ಪಡೆಯುವ ಹಕ್ಕನ್ನು ನೀಡಿರುವ ಸಂವಿಧಾನವು ತಮ್ಮ ಧರ್ಮಕ್ಕೆ ಅನುಸಾರವಾಗಿ ಆಚಾರ- ವಿಚಾರಗಳನ್ನು ಪಾಲಿಸುವ ಸ್ವಾತಂತ್ರ್ಯ ವನ್ನೂ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದು. ಇದು ವಿವಿಧತೆಯಲ್ಲಿ ಏಕತೆಯ ಧ್ಯೇಯವನ್ನು ಹೊಂದಿರುವ ಭಾರತ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಪಾದಿಸುತ್ತಾ, ಎಲ್ಲೆಡೆ ಶಾಂತಿ- ಸಾಮರಸ್ಯವನ್ನು ಸಾರುತ್ತದೆ. ವಿದ್ಯಾಲಯಗಳು ಈ ಸಾಂವಿಧಾನಿಕ ಮೌಲ್ಯವನ್ನು ಅರ್ಥಮಾಡಿಕೊಂಡು ತಮ್ಮ ವಿದ್ಯಾರ್ಥಿಗಳಲ್ಲಿ ಈ ಉದಾತ್ತ ಸಹಿಷ್ಣತಾ ಗುಣವನ್ನು ಬೆಳೆಸಲು ಒತ್ತುಕೊಡಬೇಕು.
ಆದರೆ ಇಂದು ಧಾರ್ಮಿಕ ವೇಷಭೂಷಣದ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ತೋರುವ ತಾರತಮ್ಯ ನೀತಿ ಮತ್ತು ಅವರಹಕ್ಕುಗಳ ನಿರಾಕರಣೆಯು ಆರ್ಟಿಕಲ್ 14 , 15, 17 ಮತ್ತು 25 ರ ಉಲ್ಲಂಘನೆಯಾಗಿದೆ.
ಕೆಲವು ಶೈಕ್ಷಣಿಕ ಸಂಸ್ಥೆಗಳು ಮತ್ತು ಅದರ ಆಡಳಿತಾತ್ಮಕ ಅಧಿಕಾರಿಗಳು ಧಾರ್ಮಿಕ ಅಸಹಿಷ್ಣುತೆಯ ಮನೋಭಾವ ಹೊಂದಿದ್ದು, ಇದರಿಂದ ಇಂತಹ ಅನೇಕ ಸಮಸ್ಯೆಗಳು ಪ್ರಚೋದಿಸಲ್ಪಡುತ್ತಿದೆ. ಇದರಿಂದ ನ್ಯಾಯಯುತ ಪರಿಹಾರದ ಪ್ರಕ್ರಿಯೆಯು ವಿಳಂಬಗೊಳ್ಳುತ್ತಿದೆ.
ಧಾರ್ಮಿಕ ಅಸಹಿಷ್ಣುತೆ ಬೆಳೆಯಲು ಅವಕಾಶ ಸಿಗದಂತೆಶಿಕ್ಷಣ ಸಂಸ್ಥೆಯು ಶೀಘ್ರವೇ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡು ಅಮಾನತುಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ನೆರವು ನೀಡಿ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕು.ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಗ್ರಹಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.