ಹಫರ್ ಅಲ್ ಬಾತಿನ್ (ವಿಶ್ವ ಕನ್ನಡಿಗ ನ್ಯೂಸ್) : ಡಿಕೆಯಸ್ಸಿ ಯು ಕಳೆದ 26 ವರ್ಷಗಳಿಂದ ಸೌದಿ ಅರೇಬಿಯಾದ ಪೂರ್ವ ಪ್ರದೇಶವಾದ ಹಫರ್ ಅಲ್ ಬಾತಿನ್ ನಲ್ಲಿ ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನದಲ್ಲಿ 27-06-1996 ಅಬೂಬಕ್ಕರ್ ಬರ್ವ ರವರ ನೇತೃತ್ವದಲ್ಲಿ ಕಾರ್ಯಾಚರಿಸಿತು.
ಈ ಸಂಸ್ಥೆಯ 2021-22ನೇ ಸಾಲಿನ ಹಫರ್ ಅಲ್ ಬಾತಿನ್ ಘಟಕದ ಮಹಾಸಭೆಯು ಸಿರಾಜ್ ಕುಂತೂರ್ ರವರ ಘನ ಅಧ್ಯಕ್ಷತೆಯಲ್ಲಿ ಡಿಕೆಯಸ್ಸಿ ಸಭಾಂಗಣದಲ್ಲಿ ಗುರುವಾರ 23-12-2021 ರಂದು ನಡೆಯಿತು.
ಗೌರವಾಧ್ಯಕ್ಷರಾದ ಉಸ್ತಾದ್ ನಜೀಮ್ ಮದನಿ ಯವರ ನೇತ್ರತ್ವದಲ್ಲಿ ಅಸ್ಮಾ ಉಲ್ ಹುಸ್ನಾ ಮಜ್ಲಿಸಿನೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಉಸ್ತಾದ್ ಅಬ್ದುಲ್ ಕರೀಂ ಲತೀಫಿ ದುವಾಗೈದರು. ಉಸ್ತಾದ್ ರಫೀಕ್ ಸಅದಿ ಖಿರಾಅತ್ ಪಠಿಸಿದರು ಮತ್ತು ಸಭೆಗೆ ಆಗಮಿಸಿದ ಸರ್ವಸದಸ್ಯರನ್ನು ಜನಾಬ್ ಸಿದ್ದೀಕ್ ಕನ್ಯಾನರವರು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷರಾದ ಜ:ಅಬ್ದುರ್ರಹ್ಮಾನ್ ಪಾಣಾಜೆ, ಝೋನಲ್ ಪ್ರಧಾನ ಕಾರ್ಯದರ್ಶಿ ಜ:ಮುಹಮ್ಮದ್ ರೋಯಲ್ ಮುಕ್ವೆ, ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಜ:ಅಬ್ದುಲ್ ಗಫೂರ್ ಸಜಿಪ, ಝೋನ್ ಉಪಾಧ್ಯಕ್ಷ ಜ:ಉಸ್ಮಾನ್ ಹೊಸಂಗಡಿ ಉಪಸ್ಥಿತರಿದ್ದರು.
ಡಿಕೆಯಸ್ಸಿ ಖಾದಿಮ್ ಇಸ್ಮಾಯಿಲ್ ಕಾಟಿಪಲ್ಲ ಚುನಾವನಾಧಿಕಾರಿಯಾಗಿ 2021-22 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಉಸ್ತಾದ್ ನಜೀಮ್ ಮದನಿ, ಅಧ್ಯಕ್ಷರಾಗಿ ಜ:ಸಿರಾಜ್ ಕುಂತೂರ್,ಪ್ರಧಾನಕಾರ್ಯದರ್ಶಿಯಾಗಿ ಜ:ಮುಹಮ್ಮದ್ ಅಮ್ಮುಂಜೆಕೋಶಾಧಿಕಾರಿಯಾಗಿ ಜ:ಅಹ್ಮದ್ ಶಾಹ್, ಆಯ್ಕೆಯಾದರು.ಹಾಗೂ 15 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಕೊನೆಯದಾಗಿ ಪ್ರಧಾನ ಕಾರ್ಯದರ್ಶಿ ಜ: ಮುಹಮ್ಮದ್ ಅಮ್ಮುಂಜೆಯವರು ಧನ್ಯವಾದಗೈದು, ಸ್ವಲಾತುನ್ನೆಬಿ(ಸ) ಯೊಂದಿಗೆ ಮುಕ್ತಾಯಗೊಳಿಸಿದರು. ಇರ್ಷಾದ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.