ಶಿವಮೊಗ್ಗ(ವಿಶ್ವ ಕನ್ನಡಿಗ ನ್ಯೂಸ್) : ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವದ ಮೂಲಕ ಕನಕದಾಸರು ರಚಿಸಿರುವ ಕೀರ್ತನೆಗಳ ಅಭಿಯಾನ ಹೆಚ್ಚು ಅರ್ಥಪೂರ್ಣವಾಗಿದೆ. ಕುಲ ಕುಲ ಎಂದು ಬಡಿದಾಡ ಬೇಡಿರಿ ಎಂದು ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ತಲುಪಿಸಿರುವ ಕನಕದಾಸರ ಕೀರ್ತನೆಗಳು ಸಮಾಜಕ್ಕೆ ದಾರಿದೀಪವಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಅವರು ಕುವೆಂಪು ಕಲಾ ಮಂದಿರದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕನರ್ಾಟಕ ಜಾನಪದ ಕಲಾ ಕೇಂದ್ರ, ಜನಸ್ಪಂದನ ಡೆವಲಪ್ಮೆಂಟ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆ ಅಡಿಯಲ್ಲಿ ಪ್ರಾಯೋಜಿತ ಕಾರ್ಯಕ್ರಮ ಪತಂಜಲಿ ಸಂಸ್ಥೆಯ 25ನೇ ವರ್ಷದ ಬೆಳ್ಳಿಹಬ್ಬ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾಯರ್ಾಗಾರ 100 ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವನ ಸಮೂಹ ನೃತ್ಯರೂಪಕ ಜಾನಪದ ಯುವಜನಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಮತ್ತು ಪುರಂದರದಾಸರು ದಾಸ ಸಾಹಿತ್ಯದ ಅಶ್ವಿನಿದೇವತೆಗಳು. 534 ವರ್ಷಗಳ ಹಿಂದೆ ಕನಕದಾಸರು ರಚಿಸಿರುವ ಕೀರ್ತನೆಗಳನ್ನೋಳಗೊಂಡ ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವ ಸಮೂಹ ನೃತ್ಯರೂಪಕ ಅತ್ಯಂತ ಶ್ರೇಷ್ಠವಾದ ಕಾರ್ಯಕ್ರಮವಾಗಿದೆ. ಜಾನಪದ ಯುವಜನೋತ್ಸವದ ಮೂಲಕ ಎಲೆಮರೆಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಸಾಧ್ಯ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ಬೆಂಬಲ ನೀಡಲಾಗುವುದು ಎಂದರು.
ಪ್ರಾಸ್ಥಾವಿಕವಾಗಿ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪತಂಜಲಿ ಜೆ.ನಾಗರಾಜ್ ಮಾತನಾಡಿ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಹರಿಕಥಾ ಕಲಾವಿದ ಜಿ.ಆರ್.ಕೇಶವಮೂತರ್ಿ ಸ್ಮರಣೆಯೊಂದಿಗೆ ಪತಂಜಲಿ ಸಂಸ್ಥೆಯನ್ನು ಮಾದರಿಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆ, ತಾಲ್ಲೂಕ್, ಗ್ರಾಮಗಳಲ್ಲಿ ಕಲಾವಿದರ ಸಂಘಟನೆಯನ್ನು ಬೆಳೆಸಲಾಗಿದೆ. 100 ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವನ ಸಮೂಹ ನೃತ್ಯರೂಪಕ ಜಾನಪದ ಯುವಜನಮೇಳವನ್ನು ಆಯೋಜಿಸಲಾಗಿದೆ ಎಂದರು.
ಕುರಿ ಉಣ್ಣೆ ರೈತ ಉತ್ಪಾದಕರ ಕಂಪನಿ ನಿಯಮಿತ ಅಧ್ಯಕ್ಷ ಎ.ಎನ್.ಮಹೇಶ್, ನೋಟರಿ ವಕೀಲ ಡಿ.ಸಿ.ಪುಟ್ಟೇಗೌಡ, ಚಂದ್ರವನ ಕಂಪು ಪತ್ರಿಕೆ ಸಂಪಾದಕಿ ವಾಣಿ ಚಂದ್ರಯ್ಯನಾಯ್ಡು, ಕನರ್ಾಟಕ ಜಾನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂಟಿಕೆ ಪಿಂಟಿಕೆ ಜಾನಪದ ಕಲಾವಿದ ನಾಟಿ ವೈದ್ಯ ಡಾ: ಹೆಚ್.ಸಿ.ಈಶ್ವರನಾಯಕ್, ಅಂತರಾಷ್ಟ್ರೀಯ ಯೋಗ ಪಟು ಬೆಂಕಿ ಶೇಖರಪ್ಪ, ವಿಜಯಲಕ್ಷ್ಮಿ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ, ಕಸ್ತೂರಿ ರಂಗನ್ ಸಂಚಾಲಕ ಸಿ.ಪಿ.ಐ.ಮುಖಂಡ ವಿಜಯಕುಮಾರ್, ಆಮ್ ಆದ್ಮಿ ಪಾಟರ್ಿ ಜಿಲ್ಲಾಧ್ಯಕ್ಷ ಡಾ: ಸುಂದರ್ಗೌಡ, ಗೃಹ ರಕ್ಷಕದಳದ ಪ್ರಭಾರ ಸಮಾದೇಷ್ಠರ ಹಾಲಪ್ಪ ಡಾವಣಗೇರಿ, ಮೂಡಿಗೆರೆ ಕ.ರ.ವೇ. ಅಧ್ಯಕ್ಷೆ ಕೊಡಗಿನ ಕಾವೇರಿ ಹೇಮಾವತಿ ಕಾವೇರಪ್ಪ ವಾಣಿ, ಚಿಕ್ಕಮಗಳೂರು ಕ.ರ.ವೇ. ಅಧ್ಯಕ್ಷ ತೇಗೂರು ಜಗದೀಶ್ ಅರಸ್, ಡಿಜಿಟಲ್ ವಿಡಿಯೋ ಪೋಟೋ ಸ್ಟುಡಿಯೋ ಮಾಲೀಕ ಸಿ.ಡಿ.ವಿನಯ್, ಪುಷ್ಪಾಲಕ್ಷ್ಮಣ್, ರಾಷ್ಟ್ರೀಯ ಸೇವಾ ಕಾರ್ಯಕತರ್ೆ ಬಿ.ಸಿ.ಶೈಲಾಶ್ರೀ, ಸುಮ, ಕಲಾವಿದ ಹರೀಶ್, ಚಿಕ್ಕಬಾಸೂರಿನ ಪರಮೇಶ್ವರಪ್ಪ, ಕಮಲಮ್ಮ, ಚೌಡಮ್ಮ, ಕೆ.ಎಂ.ನಂಜುಂಡಪ್ಪ, ಹಿರೇನಲ್ಲೂರಿನ ಬಸವರಾಜಪ್ಪ, ಗಂಗಮ್ಮ, ಬೀರೂರಿನ ರಾಮಸ್ವಾಮಿ, ಬಿ.ಹೆಚ್.ನಂಜುಂಡಪ್ಪ, ಉಪಸ್ಥಿತರಿದ್ದರು.
ಕಲಾತಂಡದ ಕಲಾವಿದರಾದ ಹೆಚ್.ಸಿ.ಹೇಮಾವತಿ, ಸಿ.ಎನ್.ಅನಿತಾ, ಪತಂಜಲಿ ಜೆ.ನಾಗರಾಜ್, ಚೆನ್ನರಾಜ್, ನಾಗರತ್ನ, ಲಿಂಗರಾಜ್, ಶ್ರೀನಿವಾಸ್, ಶ್ಯಾಮ್ಮಿರಜ್ಕರ್, ವಿಟ್ಟುಮಿರಜ್ಕರ್, ಜಿ.ಈ.ಶಿವಾನಂದಪ್ಪ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಅಶ್ವಮಮೇದ ಸಂಚಾರಿ ವೈದ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ:ವೆಂಕಟೇಶ್ರವರಿಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪನವರ ಅಭಿನಂದನಾ ಶುಭ ಸಂದೇಶ ಪತ್ರವನ್ನು ಶಾಸಕ ಸಿ.ಟಿ.ರವಿ ನೀಡಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪತಂಜಲಿ ಚಿಕ್ಕಮಗಳೂರು ಶಾಖೆ ಗೌರವಾಧ್ಯಕ್ಷ ಡಾ: ಎಂ.ಆರ್.ಬಸಪ್ಪ ಮಾಳೇನಹಳ್ಳಿ ವಹಿಸಿದ್ದರು. ಪ್ರಧಾನ ಕಾರ್ಯದಶರ್ಿ ಸಿ.ಆರ್.ರಘು ಸ್ವಾಗತಿಸಿ ವಂದಿಸಿದರು. ವೀರಗಾಸೆ ಕಲಾವಿದ ಜಿ.ಈ.ಶಿವಾನಂದಪ್ಪ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.