(www.vknews.com) : ರಾಜ್ಯದ ಪ್ರಭಾವಿ ಸಂಘಟನೆಯಾದ SKSSF ಹಾಗೂ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ನಡೆಸುತ್ತಿರುವ ಶೈಕ್ಷಣಿಕ ಯೋಜನೆಗಳನ್ನು ತಿಳಿಸಿದ ಸಂಘಟನೆಯ ನಾಯಕರು, ಕಮ್ಯೂನಿಟಿ ಸೆಂಟರ್ ಮಾಡುತ್ತಿರುವ ವ್ಯವಸ್ಥಿತ ಶೈಕ್ಷಣಿಕ ಅಭಿವೃದ್ದಿ ಯೋಜನೆಗಳನ್ನು ಶ್ಲಾಘಿಸಿತು. ಸಂಘಟನೆಯು ಮುಂದಿನ ದಿನಗಳಲ್ಲಿ ಪುತ್ತೂರು ತಾಲೂಕಿನಲ್ಲಿ ನಡೆಸಲು ಉದ್ದೇಶಿಸಿರುವ ವಿದ್ಯಾರ್ಥಿಗಳ ಉತ್ತೇಜನಾ ಕಾರ್ಯಕ್ರಮ, ಕಲಿಕಾ ಸಾಮರ್ಥ್ಯ ಅಭಿವೃದ್ದಿ, ಪೇರೆಂಟಿಂಗ್, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕ್ಯಾರಿಯರ್ ಗೈಡೆನ್ಸ್, ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಮತ್ತು ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಪರಸ್ಪರ ಸಹಯೋಗದ ಅಗತ್ಯತೆಯನ್ನು ವಿವರಿಸಿದರು.
ಕಮ್ಯೂನಿಟಿ ಸೆಂಟರ್ ಈ ಮಹತ್ವದ ಯೋಜನೆಯಲ್ಲಿ ಪೂರ್ಣ ಸಹಕಾರ ನೀಡುವುದು ಮತ್ತು ತಮ್ಮ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯಲು ಸದಾ ಸಿದ್ದ ಇರುವುದಾಗಿ ಭರವಸೆ ನೀಡಿತು. ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ , SKSSF ಪುತ್ತೂರು ವಲಯ ಪ್ರ. ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ,ಕೋಶಾಧಿಕಾರಿ ಅಶ್ರಫ್ ಮುಕ್ವೆ , ಕಾರ್ಯಕಾರಿ ಸಮಿತಿ ಸದಸ್ಯರಾದ ಮುಹಮ್ಮದ್ ರಫೀಕ್ ಫೈಝಿ ಮುಂತಾದವರು ನಿಯೋಗದಲ್ಲಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.