(www.vknews.com) : ಟೀಂ ಬಿ ಹ್ಯೂಮನ್ ವತಿಯಿಂದ ಮೇಕ್ ಎ ಚೇಂಜ್ ಫೌಂಡೇಶನ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕೊರೋನಾ ಲಸಿಕಾ ನೀಡುವ ಕಾರ್ಯಕ್ರಮ ಜನವರಿ 29 ಶನಿವಾರದಂದು ಸಹೋದಯ ಹಾಲ್ ಬಲ್ಮಠ ಇಲ್ಲಿ ಪೂರ್ವಾಹ್ನ ಗಂಟೆ 9 ರಿಂದ ಅಪರಾಹ್ನ 3 ಘಂಟೆಯವರೆಗೆ ನಡೆಯಲಿದೆ.
15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್, 18 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಢ್, 60 ವರ್ಷ ಮೇಲ್ಪಟ್ಟ ವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು. ಪ್ರಾಯ 65 ದಾಟಿದ ರೋಗಿಗಳು, ವಿಕಲಚೇತನರಿಗೆ ಪಿಕ್ & ಡ್ರಾಪ್ ಗಾಗಿ ನಗರ ಮಿತಿಯಲ್ಲಿ ವಾಹನದ ವ್ಯವಸ್ಥೆ ಮಾಡಲಾಗುವುದು.
ಬೂಸ್ಟರ್ ಡೋಸ್ ಪಡೆಯುವವರು ಎರಡನೇಯ ಡೋಸ್ ಪಡೆದು 9 ತಿಂಗಳು ಆಗಿರಬೇಕು.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ವ್ಯಾಕ್ಸಿನ್ ಪಡೆಯುವರು ಆದರ್ ಕಾರ್ಡ್, ಪಾಸ್ ಪೋರ್ಟ್, ಮೊಬೈಲ್ ತರಬೇಕು. ಟೊಕನ್ ಸ್ಥಳದಲ್ಲೇ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91-9880012388 +91-9880232388
Team B-Human
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.