ಒಬ್ಬ ರಾಜಕಾರಣಿ ತಾನು ಮುಸ್ಲಿಂ ಎಂದು ಹೇಳುತ್ತಾ, ಅನ್ಯರ ಆರಾಧ್ಯರ ಮುಂದೆ ಪೂಜೆ-ಪ್ರಸಾದಕ್ಕೆ ನಿಲ್ಲುತ್ತಾನೆ ಎಂದರೆ ಅದು ವಂಚನೆಯಾಗಿದೆ
(www.vknews.in) ; ಇಸ್ಲಾಮಿನ ವಿಶ್ವಾಸ, ನೀತಿ ಮತ್ತು ನಿಮಯಮಗಳು ಬಡವನಿಗೆ, ಶ್ರೀಮಂತನಿಗೆ, ರಾಜಕಾರಣಿಗೆ, ಬಿಕ್ಷುಕನಿಗೆ, ಕರಿಯನಿಗೆ, ಬಿಳಿಯನಿಗೆ, ಪುರುಷರಿಗೆ ಮತ್ತು ಸ್ತ್ರೀಯರಿಗೆ ಒಂದೇ ರೀತಿಯದ್ದಾಗಿದೆ. ಇಸ್ಲಾಮಿನಲ್ಲಿ ಹಲಾಲ್-ಹರಾಮ್, ಸತ್ಕರ್ಮ ಮತ್ತು ದುಷ್ಕರ್ಮ, ಪಾಪ ಮತ್ತು ಪುಣ್ಯ, ಶುದ್ಧ ಮತ್ತು ಅಶುದ್ಧವನ್ನು ವಿಭಜಿಸಲಾಗಿದೆ. ಅದನ್ನು ಬೆರೆಸುವ ಅಥವಾ ಕಲುಷಿತಗೊಳಿಸಿವ ಸ್ವಾರ್ಥ ಹಿತಾಸಕ್ತಿಯ ಶೈತಾನಿಯತ್ತನ್ನು ಕಠಿಣವಾಗಿ ವಿರೋಧಿಸಬೇಕು ಎಂದು ಕಲ್ಲೆಗ ಜುಮ್ಮಾ ಮಸೀದಿಯ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಸಮುದಾಯದೊಂದಿಗೆ ವಿನಂತಿಸಿದರು.
ಒಬ್ಬ ರಾಜಕಾರಣಿ ತಾನು ಮುಸ್ಲಿಂ ಎಂದು ಹೇಳುತ್ತಾ, ಅನ್ಯರ ಆರಾಧ್ಯರ ಮುಂದೆ ಪೂಜೆ-ಪ್ರಸಾದಕ್ಕೆ ನಿಲ್ಲುತ್ತಾನೆ ಎಂದರೆ ಅದು ವಂಚನೆಯಾಗಿದೆ. ಆತನಿಗೆ ವಿಶ್ವಾಸ ಇಲ್ಲದ ಮೇಲೆ ಈ ನಾಟಕವು ಅನ್ಯರ ಆರಾಧ್ಯರನ್ನು ಅವಮಾನಿಸುವುದಾಗಿದೆ. ವಿಶ್ವಾಸ ಇದೆ ಎಂದಾದರೆ ಆತನಿಗೆ ಇಸ್ಲಾಮಿನಲ್ಲಿ ಯಾವುದೇ ಮಾನ್ಯತೆ ಇಲ್ಲ. ಸೌಹಾರ್ಧತೆ ಮತ್ತು ಅನಿವಾರ್ಯತೆ ಎಂದು ಹೇಳುವುದಾದರೆ, ಅಂತಹ ಅನಿವಾರ್ಯತೆ ಇಸ್ಲಾಮಿಗೂ, ಮುಸ್ಲಿಮರಿಗೂ ಅಗತ್ಯವಿಲ್ಲ. ಆತ ಈ ಮೂಲಕ ಮುಸ್ಲಿಮರಿಗೆ ಯಾವುದೇ ಒಳಿತು ಮಾಡುವುದೂ ಬೇಡ. ಇಸ್ಲಾಮಿನ ಮೂಲ ಆಶಯವನ್ನು ನಾಶ ಮಾಡುವ ಈ ಸಮಯ ಸಾಧಕರನ್ನು ಸಮುದಾಯ ತಿರಸ್ಕರಿಸಬೇಕು ಎಂದು ಉಸ್ತಾದರು ಕರೆ ನೀಡಿದರು.
ಶ್ರಿಮಂತನಿಗೊಂದು ನ್ಯಾಯ, ಬಡವನಿಗೊಂದು ನ್ಯಾಯ ಇಸ್ಲಾಮಿನಲ್ಲಿ ಇಲ್ಲ. ಮದುವೆ ಇಸ್ಲಾಮಿನ ರೀತಿಯಲ್ಲೇ ಆಗಬೇಕು. ಅದು ಎಲ್ಲರಿಗೂ ಅನುಕೂಲಕರ ಮತ್ತು ಸರಳವಾಗಿದೆ. ಅದನ್ನು ನಾವು ಅನುಸರಿಸಬೇಕು. ಧಾರ್ಮಿಕ ನಾಯಕರು ಸರಳ ವಿಹಾವನ್ನು ಪ್ರೋತ್ಸಾಹಿಸುವ ಮತ್ತು ಸರಳ ವಿಹಾವನ್ನು ಶ್ರೇಷ್ಠ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಬೌತಿಕ ಆಯ್ಕೆ, ಪ್ರತಿಷ್ಠೆ ಮತ್ತು ಆಡಂಬರದಲ್ಲಿ ಮೈಮರೆತಿರುವ ನಮ್ಮ ಕಣ್ಣು-ಕಿವಿಗಳಿಗೆ ಕುರುಡು ಬಾದಿಸಿದೆ. ಇದಕ್ಕೆ ಸಮುದಾಯದ ಉಲೆಮಾಗಳನ್ನು ಪ್ರಶ್ನಿಸಿ ಪ್ರಯೋಜನ ಇಲ್ಲ ಎಂದು ಖತೀಬರು ಹೇಳಿದರು.
ಹಿಜಾಬ್ ಮುಸ್ಲಿಮ್ ಸ್ತ್ರೀಯ ಸಂವಿಧಾನಿಕ ಹಕ್ಕು ಹೇಗೆಯೋ ಹಾಗೇ, ಅದೊಂದು ಧಾರ್ಮಿಕ ವಿಧಿ. ಶಾಲೆ -ಕಾಲೇಜಿನಲ್ಲಿ ಇದುವರೆಗೂ ಅದಕ್ಕೆ ಅವಕಾಶ ಇತ್ತು ನಮ್ಮ ಯುವತಿಯರು ಈ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು, ಹಿಜಾಬ್ ಹಾಕದೆ ಶಾಲಾ-ಕಾಲೇಜಿಗೆ ಪ್ರವೇಶ ಇಲ್ಲಾ ಎಂದು ಹೇಳಿದರೆ ಅಂತಹ ಶಿಕ್ಷಣ ಸಂಸ್ಥೆಗೆ ಯುವತಿಯರು ಸೇರದೇ ಇರುವುದು ಉತ್ತಮ. ಯಾವುದೇ ಕಾರಣಕ್ಕು ಹಿಜಾಬ್ ತೆಗೆದು ಹೋಗುತ್ತೇವೆ ಎಂದು ಕಾಂಪ್ರಮೈಸ್ ಗೆ ಹೋಗದಿರಿ. ದುನಿಯಾಕ್ಕಿಂತ ಆಕಿರ ನಮಗೆ ಶ್ರೇಷ್ಠವೂ – ಶಾಶ್ವತವೂ ಆಗಿದೆ. ಶಿಕ್ಷಣ ಪಡೆಯುವುದು ನಮ್ಮ ಹಕ್ಕು. ಇದುವರೆಗೂ ಹಾಕಿದ ಹಿಜಾಬ್ ಈಗ ಅಪಥ್ಯವಾಗಲು ಕಾರಣ ನಮ್ಮ ಹಕ್ಕುಗಳನ್ನು ಕಸಿಯುವುದಾಗಿದೆ. ಸಮುದಾಯದ ಕೆಲವು ನಾಯಕರು ಮತ್ತು ಪ್ರಗತಿಪರರು ಹಿಜಾಬ್ ಗಿಂತ ಶಿಕ್ಷಣ ಮುಖ್ಯ ಎನ್ನುತ್ತಾರೆ. ಶಿಕ್ಷಣ ಕಲಿಯುವುದೇ ಹಿಜಾಬ್ ಹಾಕಲು ಎಂದು ಈ ವರ್ಗದ ಜನರಿಗೆ ತಿಳಿಸಬೇಕು. ಮೈ ಬಿಚ್ಚುವುದು ಶಿಕ್ಷಣವಲ್ಲ. ಮೈ ಮುಚ್ಚುವುದು ಭಾರತೀಯ ಸಂಸ್ಕೃತಿ ಮತ್ತು ಅದುವೇ ಶಿಕ್ಷಣ ಪಡೆದವರ ಲಕ್ಷಣ ಎಂದ ಖತೀಬರು, ಎಕ್ಸಾಮ್ ಬರುತ್ತಿದೆ,
ಕಳೆದ ಎರಡು ವರ್ಷವೂ ಮಕ್ಕಳ ಭವಿಷ್ಯ ಆತಂಕದಲ್ಲಿತ್ತು. ಈಗ ಮತ್ತೆ ಇಂತಹ ಸಮಾಜಘಾತುಕರ ಕೃತ್ಯಕ್ಕೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹಿಜಾಬ್ ಹಾಕಿದರೆ ಶಿಕ್ಷಣದ ಭವಿಷ್ಯ ಹಾಳಾಗುತ್ತದೆ ಎನ್ನುವವರು ಇಂತಹ ಕೃತ್ಯದಿಂದ ಸಾವಿರಾರು ಮಕ್ಕಳ ಬದುಕು ಹಾಳಾಗುತ್ತದೆ ಎಂದು ಹೇಳದೇ ಇರುವುದು ಖೇದಕರ. ನಾವು ನಮ್ಮ ಹೆಣ್ಣು ಮಕ್ಕಳಲ್ಲಿ ಹಿಜಾಬ್ ಹಾಕದೆ ಶಿಕ್ಷಣ ಕಲಿಯಿರಿ ಎಂದು ಹೇಳುವುದಿಲ್ಲ. ನಾವು ಶಿಕ್ಷಣ ಕಲಿಸುವುದೇ ಹಿಜಾಬ್ ಹಾಕಿ ಸ್ತ್ರೀ ಮಾನ್ಯತೆಯನ್ನು ಘಣತೆಯನ್ನು ಎತ್ತಿ ಹಿಡಿಯಲು. ಅವಳು ನಮಗೆ ಅಮೂಲ್ಯ ರತ್ನ. ಆಕೆಯನ್ನು ನಾವು ಗೌರವಿಸುತ್ತೇವೆ. ಹಾಗಾಗಿ ನೀವು ಹೇಳುವ ಶಿಕ್ಷಣದ ಅಗತ್ಯ ನಮ್ಮ ಮಕ್ಕಳಿಗಿಲ್ಲ ಎಂದು ಖತೀಬರು ಹೇಳಿದರು.
✍🏻 ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.