ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕೇಂದ್ರದ ಉಕ್ರೇನ್ ಮಿಷನ್ ಅನ್ನು ಟೀಕಿಸಿದ ಬಿಜೆಪಿ ಸಂಸದ ವರುಣ್ ಗಾಂಧಿ, ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ಕ್ರಮವಿಲ್ಲ ಎಂದು ಆರೋಪಿಸಿದ್ದಾರೆ. ಉಕ್ರೇನ್ ನ ದುಃಸ್ಥಿತಿಯನ್ನು ವಿವರಿಸುವ ವಿದ್ಯಾರ್ಥಿಯ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ವರುಣ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸರ್ಕಾರ ನೀಡಿರುವ ಸಂಖ್ಯೆಗೆ ಕರೆ ಮಾಡಿದರೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಫೋನ್ ಗೆ ಉತ್ತರಿಸುವುದಿಲ್ಲ. ನೀವು ಗಡಿಯನ್ನು ತಲುಪಿ ಎನ್ನುತ್ತಾರೆ, ಗಡಿ ವಿದ್ಯಾರ್ಥಿ ಸಿಕ್ಕಿಹಾಕಿಕೊಂಡಿರುವ ಸ್ಥಳದಿಂದ ಸುಮಾರು 800 ಕಿ.ಮೀ ದೂರದಲ್ಲಿದೆ. ಅವಳು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿ ಹೇಳುತ್ತಾಳೆ, ಎಂದ ವರುಣ್ ಗಾಂಧಿ ಇದು ಔದಾರ್ಯವಲ್ಲ, ಸಿಕ್ಕಿಬಿದ್ದವರನ್ನು ಮರಳಿ ಕರೆತರುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
https://twitter.com/varungandhi80/status/1498157231157948421
15,000 ಕ್ಕೂ ಹೆಚ್ಚು ಜನರು ಇನ್ನೂ ಸಿಕ್ಕಿಬಿದ್ದಿರುವಾಗ ಸರ್ಕಾರ ಅವರನ್ನು ಕರೆತರಲು ಪ್ರಯತ್ನಿಸುತ್ತಿಲ್ಲ ಎಂದು ವರುಣ್ ಗಾಂಧಿ ಆರೋಪಿಸಿದರು.
ಉಕ್ರೇನ್ ಸೇನೆ ವಿದ್ಯಾರ್ಥಿಗಳನ್ನು ಹೊಡೆಯುವ ದೃಶ್ಯಾವಳಿಗಳನ್ನು ಹಂಚಿಕೊಳ್ಳುವ ಮೂಲಕ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಯಾವುದೇ ಪೋಷಕರು ಈ ದೃಶ್ಯವನ್ನು ನೋಡಲು ಇಚ್ಛಿಸವುದಿಲ್ಲ, ರಕ್ಷಣಾ ಮಿಷನ್ ಯೋಜನೆ ಏನು ಎಂದು ವಿದ್ಯಾರ್ಥಿಗಳ ಕುಟುಂಬಗಳಿಗೆ ತಿಳಿಸುವ ಬಾಧ್ಯತೆ ಸರ್ಕಾರಕ್ಕೆ ಇದೆ ಎಂದು ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.