ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಿಟ್ಲ ವಲಯ ಸಮಿತಿಯ ಮಹಾಸಭೆ ಭಾನುವಾರ (ಮಾ 13) ನಡೆಯಿತು. ವಿಟ್ಲ ವಲಯಾಧ್ಯಕ್ಷ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಕೋಶಾಧಿಕಾರಿ ಈಶ್ವರ್ ಕುಲಾಲ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ನಾಗೇಶ್ ಎಂ, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಯಾದೇಶ್ ತುಂಬೆ, ಕೋಶಾಧಿಕಾರಿ ತುಳಸಿ ಅರ್, ಉಪಾಧ್ಯಕ್ಷ ವಸಂತ ಮೂಲ್ಯ, ಜಿಲ್ಲಾ ಸಮಿತಿ ಸದಸ್ಯರಾದ ಗಂಗಯ್ಯ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಅಶಕ್ತರಿಗೆ ಎರಡು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ನಿಕಟಪೂರ್ವ ವಲಯಾಧ್ಯಕ್ಷ ದಿವಂಗತ ರುಕುಮ ಟೈಲರ್ ಅವರ ಪರವಾಗಿ ಅವರ ಕುಟುಂಬದ ಸದಸ್ಯರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ಸುಮಿತ್ರ ವರದಿ ವಾಚಿಸಿದರು, ಶಾಲಿನಿ ಲೆಕ್ಕ ಪತ್ರ ಮಂಡಿಸಿದರು. ವಸಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಸಂತಿ ಅಮೈ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.