ಚಿಕ್ಕ ಮಕ್ಕಳಿಗೆ ಕೆಫೀನ್ ಮತ್ತು ಸಕ್ಕರೆ ಪಾನೀಯಗಳನ್ನು ನೀಡದಂತೆ ಅರೋಗ್ಯ ತಜ್ಞರ ಸಲಹೆ
ಫ್ರಾನ್ಸಿಸ್ಕೊ (ವಿಶ್ವ ಕನ್ನಡಿಗ ನ್ಯೂಸ್) : ಸರ್ವಾಂಟೆಸ್ ಎನ್ನುವ ಆರು ವಯಸ್ಸಿನ ಬಾಲಕ ತನ್ನ ಬಾಯಾರಿಕೆಯನ್ನು ನೀಗಿಸಲು ಮಾನ್ಸ್ಟರ್ ಎನರ್ಜಿ ಡ್ರಿಂಕ್(ಒಂದು ರೀತಿಯ ಶಕ್ತಿ ಪಾನೀಯ) ಅನ್ನು ಸೇವಿಸಿದ್ದಾನೆ. ನಂತರ ಬಾಲಕ ಅಸ್ವಸ್ಥಗೊಂಡು ಚಡಪಡಿಸಲಾರಂಭಿಸಿದ್ದಾನೆ. ಇದನ್ನು ಕಂಡ ಸಂಬಂಧಿಕರು ಕೂಡಲೇ ಆತನನ್ನು ಸ್ಥಳೀಯ ಆಲ್ಫ್ರೆಡೋ ಪುಮಾರೆಜೊ ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಈತ ಹೃದಯಾಘಾತದಿಂದ ಬಳಲುತ್ತಿದ್ದಾನೆ ಮತ್ತು ಅವನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದ್ದಾರೆ. ಇದರ ಬಳಿಕ ಆರು ದಿನಗಳ ಕಾಲ ಕೋಮಾದಲ್ಲಿದ್ದ ಬಾಲಕ ಮೃತಪಟ್ಟಿದ್ದಾನೆ. ಈತ ಏಪ್ರಿಲ್ 16 ರಂದು ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ವರದಿಯ ಪ್ರಕಾರ, ಸರ್ವಾಂಟೆಸ್ ಈ ಮೊದಲೇ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಆದಾಗ್ಯೂ, NHS ಸೇರಿದಂತೆ ವಿವಿಧ ಆರೋಗ್ಯ ತಜ್ಞರು ಚಿಕ್ಕ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಕೆಫೀನ್ ಮತ್ತು ಸಕ್ಕರೆಯನ್ನು ಹೊಂದಿರುವ ಶಕ್ತಿ ಪಾನೀಯಗಳನ್ನು ನೀಡದಂತೆ ಸಲಹೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.