ಭಾರತೀಯ ಮುಸ್ಲಿಂ ಸಮುದಾಯದ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದ ಫುಟ್ಬಾಲ್ ತಾರೆ..
(ವಿಶ್ವ ಕನ್ನಡಿಗ ನ್ಯೂಸ್) : ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆ ಮೆಸುಟ್ ಓಝಿಲ್ ಅವರು ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು “ನಾಚಿಕೆಗೇಡಿನ ಸಂಗತಿ” ಎಂದು ಕರೆದಿದ್ದಾರೆ.
ಜರ್ಮನಿಯ ವೃತ್ತಿಪರ ಫುಟ್ಬಾಲ್ ಆಟಗಾರ ಟ್ವಿಟ್ಟರ್ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ, “ಭಾರತದಲ್ಲಿರುವ ನಮ್ಮ ಮುಸ್ಲಿಂ ಸಹೋದರ ಸಹೋದರಿಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಲೈಲತ್ ಅಲ್-ಖಾದರ್ ಪವಿತ್ರ ರಾತ್ರಿಯಲ್ಲಿ ಪ್ರಾರ್ಥಿಸುತ್ತೇನೆ. ಈ ನಾಚಿಕೆಗೇಡಿನ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸೋಣ!, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಕರೆಯಲ್ಪಡುವಲ್ಲಿ ಮಾನವ ಹಕ್ಕುಗಳಿಗೆ ಏನಾಗುತ್ತಿದೆ ?” ಎಂದು ಟ್ವೀಟ್ ಮಾಡಿದ್ದಾರೆ. #BreakTheSilence”
Praying during the holy night of Lailat al-Qadr for the safety and well-being of our Muslim brothers and sisters in India🤲🏼🇮🇳🕌Let's spread awareness to this shameful situation! What is happening to the human rights in the so-called largest democracy in the world?#BreakTheSilence pic.twitter.com/pkS7o1cHV5 — Mesut Özil (@M10) April 27, 2022
Praying during the holy night of Lailat al-Qadr for the safety and well-being of our Muslim brothers and sisters in India🤲🏼🇮🇳🕌Let's spread awareness to this shameful situation! What is happening to the human rights in the so-called largest democracy in the world?#BreakTheSilence pic.twitter.com/pkS7o1cHV5
— Mesut Özil (@M10) April 27, 2022
ಓಝೀಲ್ ಈ ಹಿಂದೆ ರಿಯಲ್ ಮ್ಯಾಡ್ರಿಡ್ ಮತ್ತು ಆರ್ಸೆನಲ್ನಲ್ಲಿ ಮಿಡ್ಫೀಲ್ಡರ್ ಆಗಿ ಆಡಿದ್ದರು, ಆದರೆ ಪ್ರಸ್ತುತ ಟರ್ಕಿಯ ದೈತ್ಯ ಕ್ಲಬ್ ಫೆನೆರ್ಬಾಸ್ನೊಂದಿಗೆ ಇದ್ದಾರೆ. ಇವರು ಜರ್ಮನಿಯು 2014 ರಲ್ಲಿ ತನ್ನ ದೇಶಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.