ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಓಫ್ ಒಮಾನಿನಾದ್ಯಂತ ಕೋವಿಡ್-19 ಸಂಬಂಧಿತ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿ ಆದೇಶ ಹೊರಡಿಸಲಾಗಿದೆ
ಮಾಧ್ಯಮದವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಅಧಿಕಾರಿಯೊಬ್ಬರು, ಎಲ್ಲಾ ಸ್ಥಳಗಳಲ್ಲಿ ಮತ್ತು ಚಟುವಟಿಕೆಗಳಾದ್ಯಂತ ಎಲ್ಲಾ ಕೋವಿಡ್ -19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತದೆ. “ಇನ್ನು ಮುಂದೆ, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಮಾಲ್ಗಳು ಮತ್ತು ಎಲ್ಲಾ ರೀತಿಯ ಸಭಾಂಗಣಗಳು ಸೇರಿದಂತೆ ಮುಚ್ಚಿದ ಮತ್ತು ತೆರೆದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಭಾನುವಾರದಂದು ನಡೆದ ಸುಪ್ರೀಂ ಕಮಿಟಿಯ ನಿರ್ಧಾರವನ್ನು ವಿವರಿಸಿದರು.
ಯಾವುದೇ ವ್ಯಕ್ತಿಯು ತನ್ನ ಬಯಕೆ ಮತ್ತು ಅವರ ಆರೋಗ್ಯ ಸ್ಥಿತಿಯ ತಿಳುವಳಿಕೆ ಇದ್ದು ಸ್ವಇಚ್ಛೆಯಿಂದ ಮಾಸ್ಕ್ ಧರಿಸಬಹುದಾಗಿದೆ. ವಿಶೇಷವಾಗಿ ಕೂಟಗಳು ನಡೆಯುವ ಸ್ಥಳಗಳಲ್ಲಿ. ಮಾಸ್ಕ್ ಧರಿಸುವ ಅಗತ್ಯವಿದ್ದಲ್ಲಿ ಧರಿಸಬಹುದು ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.